3 ಬಡ ಕುಟುಂಬಗಳಿಗೆ ನೆರವಾಗುವ ಮೂಲಕ ಅರ್ಥಪೂರ್ಣವಾಗಿ ಪದಗ್ರಹಣ ಕಾರ್ಯಕ್ರಮ ನಡೆಸಿದ ರೋಟರಿ ಆನ್ಸ್ ಕ್ಲಬ್ ಕಾರ್ಕಳ-Times of karkala

3 ಬಡ ಕುಟುಂಬಗಳಿಗೆ ನೆರವಾಗುವ ಮೂಲಕ ಅರ್ಥಪೂರ್ಣವಾಗಿ ಪದಗ್ರಹಣ ಕಾರ್ಯಕ್ರಮ ನಡೆಸಿದ ರೋಟರಿ ಆನ್ಸ್ ಕ್ಲಬ್ ಕಾರ್ಕಳ 


 ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ ಸೆಂಟರ್ ಕಾರ್ಕಳ-Times of karkala3 ಬಡ ಕುಟುಂಬಗಳಿಗೆ ನೆರವಾಗುವ ಮೂಲಕ ಅರ್ಥಪೂರ್ಣವಾಗಿ ಪದಗ್ರಹಣ ಕಾರ್ಯಕ್ರಮ ನಡೆಸಿದ ರೋಟರಿ ಆನ್ಸ್ ಕ್ಲಬ್ ಕಾರ್ಕಳ 

ರೋಟರಿ ಆನ್ಸ್ ಕ್ಲಬ್ ನ ಪದಗ್ರಹಣ ಇದರ 2020-21 ಸಾಲಿನ ರಮಿತ ಶೈಲೆಂದ್ರ ರಾವ್ ಅವರ ಅಧ್ಯಕ್ಷತೆಯ ನೂತನ ಪದಗ್ರಹಣ ಸಮಾರಂಭವು ಜುಲೈ 15 ರಂದು ರೋಟರಿ ಬಾಲ ಭವನದಲ್ಲಿ ನೆರವೇರಿತು.


ರೋಟರಿ ಮಾತ್ರ ಸಂಸ್ಥೆಯ ಅಧ್ಯಕ್ಷರು ಈ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಆಗಿರುವ ಮಿತ್ರ ಪ್ರಭ ಹೆಗಡೆಯವರು "ಹೆಣ್ಣು ಸ್ವಾಭಿಮಾನಿ ಆಗಿ ನಿಲ್ಲಬೇಕು, ಎಲ್ಲಾ ಕ್ಷೇತ್ರದಲ್ಲು ತನ್ನನ್ನು ತಾನು ತೊಡಗಿಸಿಕೊಳ್ಳಬೇಕು, ಮಹಿಳೆಯರು ಮುಂದೆ ಬಂದು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು" ಎನ್ನುವ ಶುಭ ನುಡಿಯೊಂದಿಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

ಅಧ್ಯಕ್ಷೆಯಾಗಿ ಅಧಿಕಾರವನ್ನು ಸ್ವೀಕರಿಸಿದ ರಮಿತಾ ಶೈಲೇಂದ್ರ ರಾವ್ ರವರು ತನ್ನ ಅಧಿಕಾರವಧಿಯನ್ನು  ಉತ್ತಮವಾಗಿ ಬಳಸಿಕೊಳ್ಳುತ್ತೇನೆ ಎನ್ನುವ ಸಂದೇಶವನ್ನು ನೀಡಿದರು. 

ಕಾರ್ಯಕ್ರಮದಲ್ಲಿ ಮೂರು ಬಡಕುಟುಂಬಗಳಿಗೆ ಮಹಿಳಾ ಸಹಾಯವಾಣಿಯ ಮೂಲಕ ದಿನಸಿ ಸಾಮಾನುಗಳ ವಿತರಣೆ, ಸರಕಾರಿ ಆಸ್ಪತ್ರೆ ಕಾರ್ಕಳಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು, ಮಗುವಿನ ಶಸ್ತ್ರಚಿಕಿತ್ಸೆಗೆ ಧನಸಹಾಯ, ಅಗತ್ಯ ಇರುವವರಿಗೆ ಲೇಡೀಸ್ ಗೇಟಿನ ವಿತರಣೆ ಮತ್ತು ಶಾಲಾ ಪುಸ್ತಕದ ವಿತರಣೆಯನ್ನು,ಕೊವಿಡ್ ಸಂದರ್ಭದಲ್ಲಿ ತುಂಬಾ ಶ್ರಮಜೀವಿ ಆಗಿ ಕೆಲಸ ನಿರ್ವಹಿಸಿದ ಆಶಾ ಕಾರ್ಯಕರ್ತರಾದ ಸರೋಜಿನಿ ಹಾಗೂ ಅವರಿಗೆ ಸನ್ಮಾನ, ಉಚಿತವಾಗಿ ಶ್ಲೋಕ ಸಹಸ್ರನಾಮ ಗಳನ್ನು ಹೇಳಿಕೊಡುತ್ತಿರುವ ಶ್ರೀಮತಿ ಶೈಲಜಾ ಭಟ್ ಇವರಿಗೆ ಗುರು ನಮನ ಕಾರ್ಯಕ್ರಮ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ವಿದ್ಯಾರ್ಥಿಯಾಗಿದ್ದ ವಿಶಿಷ್ಟ ಶ್ರೇಣಿಯಲ್ಲಿ 99% ಅಂಕವನ್ನು ಕಳಿಸಿದ ಕುಮಾರಿ ಕೃಷಿಕ ಅವರಿಗೆ ಸನ್ಮಾನ ಕಾರ್ಯಕ್ರಮ ಜರಗಿತು.

ಸ್ವಾತಿ ಪ್ರಕಾಶ್ ಅವರು  ಕಾರ್ಯಕ್ರಮವನ್ನು ಸ್ವಾಗತಿಸಿ, ಕಾರ್ಯದರ್ಶಿ ಪ್ರೀತಿ ಶೆಟ್ಟಿ ವರದಿ ವಾಚನ ಮಾಡಿದರು. ಜ್ಯೋತಿ ಶೆಟ್ಟಿ ಅವರು ಸಮಾರಂಭದ ನಿರೂಪಿಸಿ ನೂತನ ಕಾರ್ಯದರ್ಶಿ ಸುಮಾ ನಾಯಕ್ ಅವರು ವಂದಿಸಿದರು. ಶ್ರೀಮತಿ ಪದ್ಮಜಾ ಅವರು ಪ್ರಾರ್ಥಿಸಿ, ಶ್ರೀಮತಿ ವೃಂದಾ, ಶ್ರೀಮತಿ ಶಶಿಕಲಾ ಗೌಡ, ಶ್ರೀಮತಿ ಕವಿತಾ ಕುಟಿನೋ ಅತಿಥಿ ಅಭ್ಯಾಗತರನ್ನು ಪರಿಚಯಿಸಿದರು.https://wa.me/919945283600
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget