ಕಾರ್ಕಳ:ರಸ್ತೆ ಬದಿ ತಳ್ಳುಗಾಡಿಯ ತ್ಯಾಜ್ಯ ಆನೆಕೆರೆಗೆ!ಅನಧಿಕೃತ ವ್ಯಾಪಾರ ನಡೆಸುವವರವಿರುದ್ದ ಶಿಸ್ತು ಕ್ರಮಕ್ಕೆ ಹೋಟೆಲ್ ಮಾಲಕರ ಸಂಘ ಆಗ್ರಹ-Times of karkala
ಪರವಾನಗಿ ಪಡೆಯದೆ ರಸ್ತೆ ಬದಿಯಲ್ಲಿ ತಳ್ಳುಗಾಡಿಗಳ ಮೂಲಕ ಅನಧಿಕೃತ ವ್ಯಾಪಾರ ನಡೆಸುವವರ ವಿರುದ್ದ ಶಿಸ್ತು ಕ್ರಮ ಜರಗಿಸುವಂತೆ ಹೋಟೆಲ್ ಮಾಲಕರ ಸಂಘವು ಆಗ್ರಹಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಹೋಟೆಲ್ ಮಾಲಕರ ಸಂಘದ ಪದಾಧಿಕಾರಿಗಳು ವ್ಯಾಪಾರ ತೆರಿಗೆ,ಕಟ್ಟಡ ತೆರಿಗೆ, ಜಿಎಸ್ಟಿ, ಆದಾಯ ತೆರಿಗೆ, ಆಹಾರ ಮಾರಾಟ ತೆರಿಗೆಗಳನ್ನು ಪಾವತಿಸಿದ ಹೋಟೆಲ್ ಮಾಲಕರಿಗೆ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ತಳ್ಳುಗಾಡಿ, ಮನೆಯಲ್ಲಿ ತಯಾರಿಸಿದ ಸಿದ್ದ ಆಹಾರಗಳ ಮಾರಾಟಕ್ಕೆ ಯಾವುದೇ
ಪರವಾನಗಿ ಇರುವುದಿಲ್ಲ. ಇವರೆಲ್ಲರೂ ರಾಜಾರೋಷವಾಗಿ
ದರದ ಪೈಪೋಟಿ ಮಾಡಿ ಆಹಾರ ಒದಗಿಸುತ್ತಾರೆ.
ಅಂತಹ ತಳ್ಳುಗಾಡಿಯವರು ಸರಕಾರಕ್ಕೆ ಶುಲ್ಕ ಪಾವತಿ ಮಾಡುವುದಿಲ್ಲ. ವಿದ್ಯುಚ್ಚಕ್ತಿ ತೆರಿಗೆ
ಕಟ್ಟಬೇಕಿಲ್ಲ. ಬಾಡಿಗೆ, ಇಎಸ್ಐ, ಪಿಎಫ್,ಸೌಲಭ್ಯದ ಬಗ್ಗೆ ಪಾವತಿ ಮಾಡಬೇಕಾಗಿಲ್ಲ. ಆದರೆ ಕಾನೂನು ರೀತ್ಯಾ ಪರವಾನಗಿ ಪಡೆದ ಹೋಟೆಲ್ ಉದ್ದಿಮೆ ನಡೆಸುವವರು ಈ ಎಲ್ಲಾ ತೆರಿಗೆಗಳನ್ನು ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಆನೆಕೆರೆಗೆ ತ್ಯಾಜ್ಯ: ತಳ್ಳು ಗಾಡಿಗಳಲ್ಲಿ ಆಹಾರ ನೀಡಿದ ಬಳಿಕ ಅದರಲ್ಲಿ ಉಳಿದ ತ್ಯಾಜ್ಯವನ್ನು ಆನೆಕೆರೆ, ಸಿಗಡಿಕೆರೆಗೆ ಬಿಡಲಾಗುತ್ತದೆ. ಕೆಲವೆಡೆ ಎಲ್ಲೆಂದರಲ್ಲಿ ಬಿಸಾಡಲಾಗುತ್ತದೆ. ಶುದ್ದ ನೀರು ಕೂಡಾ ಈ ತ್ಯಾಜ್ಯದಿಂದ ಮಲಿನವಾಗುತ್ತಿದೆ. ಪುರಸಭೆ, ಗ್ರಾಮ ಪಂಚಾಯತುಗಳು ಕ್ರಮ ಕೈಗೊಳ್ಳಿ: ಈ ಬಗ್ಗೆ ಕಾರ್ಕಳ ಪುರಸಭೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತುಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಹೋಟೆಲ್ ಮಾಲಕರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಶಾಸಕರಿಗೆ ವಿವಿಧ ಇಲಾಖೆಗಳಿಗೆ ಮನವಿ ಮಾಡಿದ್ದಾರೆ.
Post a comment