"ಮಣಿಪಾಲದಲ್ಲಿ ವೈದ್ಯೆಯಾಗಿದ್ದೇನೆ ಮತ್ತು ಪ್ರೊಫೆಸರ್ ಆಗಿಯೂ ಕೆಲಸ ಮಾಡುತ್ತಿದ್ದೇನೆ" ಎಂದು ನಕಲಿ ದಾಖಲೆ ಸೃಷ್ಟಿಸಿ ಪೋಲೀಸರ ಅತಿಥಿಯಾದರು!-Times of karkala


 ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ ಸೆಂಟರ್ ಕಾರ್ಕಳ-Times of karkala

"ಮಣಿಪಾಲದಲ್ಲಿ ವೈದ್ಯೆಯಾಗಿದ್ದೇನೆ ಮತ್ತು ಪ್ರೊಫೆಸರ್ ಆಗಿಯೂ ಕೆಲಸ ಮಾಡುತ್ತಿದ್ದೇನೆ" ಎಂದು ನಕಲಿ ದಾಖಲೆ ಸೃಷ್ಟಿಸಿ ಪೋಲೀಸರ ಅತಿಥಿಯಾದರು!


ಉಡುಪಿ: ಸಾಲ ಪಡೆಯಲು ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ವೈದ್ಯೆಯೊಬ್ಬಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಉಪ್ಪೂರು ಸಾಲ್ಮರ ನಿವಾಸಿ ಡಾ.ರೆನಿಟಾ ಸೋನಿಯಾ ಡಿಸೋಜಾ ಬಂಧಿತ ಆರೋಪಿ. ಈಕೆಗೆ ಸಹಾಯ ಮಾಡಿದ ಇನ್ನಿಬ್ಬರನ್ನು ಸಹ ಪೊಲೀರು ವಶಕ್ಕೆ ಪಡೆದಿದ್ದಾರೆ.

ರೆನಿಟಾ ಐಷಾರಾಮಿ ಕಾರು ಖರೀದಿಗೆ ಸಾಲ ಪಡೆಯಲು ಮುಂದಾಗಿದ್ದಳು. ಇದಕ್ಕಾಗಿ ಕಾಪು ಮೂಡಬೆಟ್ಟಿನ ಬ್ಯಾಂಕ್ ಆಫ್ ಬರೋಡ ಶಾಖೆಗೆ ಅರ್ಜಿ ಸಲ್ಲಿಸಿದ್ದಳು. ನಾನು ಮಣಿಪಾಲದಲ್ಲಿ ವೈದ್ಯೆಯಾಗಿದ್ದೇನೆ ಮತ್ತು ಪ್ರೊಫೆಸರ್ ಆಗಿಯೂ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದಳು. ಅಲ್ಲದೆ, ತನಗೆ ಮಾಸಿಕ 2.66 ಲಕ್ಷ ಸಂಬಳವಿದೆ ಎಂದು ನಕಲಿ ದಾಖಲೆ ಸಹ ಸೃಷ್ಟಿಸಿದ್ದಳು.

ಆದರೆ, ವೇತನ ಸ್ಲಿಪ್ ಪರಿಶೀಲಿಸಲು ಮಣಿಪಾಲ ಸಂಸ್ಥೆಯ ಗಮನಕ್ಕೆ ತಂದಾಗ ಸತ್ಯ ಬಯಲಾಗಿದೆ. ತಮ್ಮಲ್ಲಿ ಆ ರೀತಿಯ ಯಾವುದೇ ವೈದ್ಯೆ ಕೆಲಸ ಮಾಡುತ್ತಿಲ್ಲ ಎಂದು ಸಂಸ್ಥೆ ಹೇಳಿದೆ.


ಬಳಿಕ ಬ್ಯಾಂಕ್ ಮ್ಯಾನೇಜರ್ ನೀಡಿರುವ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ರೆನಿಟಾ ಹಾಗೂ ಅವಳಿಗೆ ನಕಲಿ ದಾಖಲೆ ಮಾಡಿಕೊಟ್ಟ ಚಿತ್ರಪಾಡಿ ನಿವಾಸಿ ವಿಜಯ ಕೊಠಾರಿಯನ್ನು ಬಂಧಿಸಿದ್ದಾರೆ.


https://wa.me/919945283600




Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget