ಸಾಣೂರಿನಲ್ಲಿ ಕಾಂಗ್ರೆಸ್ ಪ್ರಮುಖರು ಬಿಜೆಪಿ ಸೇರ್ಪಡೆ-Timesof karkala
ಕಾರ್ಕಳ ಕಾಂಗ್ರೆಸ್ ಡಿಕೆಶಿ ಪ್ರತಿಜ್ಞಾ ವಿಧಿ ಕಾರ್ಯದಲ್ಲಿ ನಿರತರಾಗಿರುವಾಗಲೇ ಇತ್ತ ಬಿಜೆಪಿ ಸಾಣೂರು ಪಂಚಾಯತ್ ನ ಕಾಂಗ್ರೆಸ್ ಪ್ರಮುಖರನ್ನು ತನ್ನತ್ತ ಸೆಳೆದುಕೊಂಡಿದೆ.
ಸಾಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಆನಂದ ಶೆಟ್ಟಿ ಜೊತೆಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಲತಾ ಶೆಟ್ಟಿಗಾರ್, ಆಶೋಕ್ ಶೆಟ್ಟಿಗಾರ್, ಧೀರಜ್ ಶೆಟ್ಟಿ ಯವರು ಬಿಜೆಪಿ ಸರ್ಕಾರದ ಕಾರ್ಯ ವೈಖರಿ ಗಮನಿಸಿ ಇಂದು ವಿಕಾಸ ಕಛೇರಿಯಲ್ಲಿ ಶಾಸಕ ವಿ ಸುನಿಲ್ ಕುಮಾರ್, ಅಧ್ಯಕ್ಷರಾದ ಮಹಾವೀರ ಹೆಗ್ಡೆ ಹಾಗೂ ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಪಕ್ಷದ ಧ್ವಜ ನೀಡುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.
ಜಾಹೀರಾತು
ಜಾಹೀರಾತು

Post a comment