ಕಾರ್ಕಳ:ಅಂತರಾಷ್ಟ್ರೀಯ ಹುಲಿ ಸಂರಕ್ಷಣಾ ದಿನ:ಕರಪತ್ರ ಬಿಡುಗಡೆ ಮಾಡುವ ಮೂಲಕ ಆಚರಣೆ-Times of karkala
ರೋಟರಿ ಆನ್ಸ್ ಕ್ಲಬ್ ಕಾರ್ಕಳ ಹಾಗೂ ಅರಣ್ಯ ಇಲಾಖೆ ಕಾರ್ಕಳ ಇದರ ವತಿಯಿಂದ ಅಂತರಾಷ್ಟ್ರೀಯ ಹುಲಿ ಸಂರಕ್ಷಣಾ ದಿನ ವನ್ನು ಅರಣ್ಯ ಇಲಾಖೆ ಅಲ್ಲಿ ಕರಪತ್ರ ಬಿಡುಗಡೆ ಮಾಡುವ ಮೂಲಕ ಆಚರಿಸಲಾಯಿತು.ರಾಜ್ಯ ಮಟ್ಟದ ಹುಲಿಯ ಸಂರಕ್ಷಣೆ ಯ ಬಗ್ಗೆ ನಡೆದ ಫೇಸ್ ಪೈಂಟಿಂಗ್, ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮವನ್ನು ಕಾರ್ಕಳ ಅರಣ್ಯ ವಲಯಾಧಿಕಾರಿ ಆಗಿರುವ ದಿನೇಶ್ ಡಿ.ಕೆ ಉದ್ಘಾಟಿಸಿದರು.
ರೋಟರಿ ಆನ್ಸ್ ಸಂಸ್ಥೆಯ ಅಧ್ಯಕ್ಷೆ ರೋ. ರಮಿತಾ ಶೈಲೆಂದ್ರ ರಾವ್, ಜ್ಯೋತಿ ಶೆಟ್ಟಿ ಹಾಗೂ ಮಾಲಿನಿ ಅವರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



Post a comment