ಬೆಳ್ಮಣ್:ಪೇಟೆಯ ಮುಕ್ಕಾಲು ಭಾಗ ಸಂಪೂರ್ಣ ಸೀಲ್ ಡೌನ್!ಭಯದ ನೆರಳಲ್ಲೇ ಜೀವನ ಕಳೆಯುವ ಬೆಳ್ಮಣ್ ಜನತೆ-Times of karkala
ಗ್ರಾಮ ಪಂಚಾಯತಿ ಬೆಳ್ಮಣ್ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಕರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಗುರುವಾರವೂ ಬೆಳ್ಮಣ್ನ ಎರಡು ಮಂದಿಯಲ್ಲಿ ಕರೋನಾ ಸೋಂಕು ದೃಢಪಟ್ಟಿದೆ.

ಬುಧವಾರ ಒಂದೇ ದಿನದಲ್ಲಿ 21 ಮಂದಿಗೆ ಕರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಬೆಳ್ಮಣ್ ಪೇಟೆಯಲ್ಲಿ ಸುಮಾರು 46 ಮನೆಗಳನ್ನು ಹಾಗೂ 88 ಅಂಗಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ.

ನಿರಂತರ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಬೆಳ್ಮಣ್ ಜನತೆ ಭಯದ ನೆರಳಲ್ಲೇ ಜೀವನ ಕಳೆಯುವಂತಾಗಿದೆ. ಇದೀಗ ಬೆಳ್ಮಣ್ ಪೇಟೆಯ ಮುಕ್ಕಾಲು ಭಾಗ ಸಂಪೂರ್ಣ ಸೀಲ್ ಡೌನ್ಗೊಂಡಿದ್ದು ಇಡೀ ಪೇಟೆ ಪರಿಸರ ಬಿಕೋ ಎನುತ್ತಿದೆ.



Post a comment