ಉಡುಪಿ: ಸೋಂಕಿತ ಪತಿಯಿಂದ ಆಸ್ಪತ್ರೆಯಿಂದಲೇ ಪತ್ನಿಗೆ ವಿಡಿಯೋ ಸಂದೇಶ
ಉಡುಪಿ: ಕೋವಿಡ್ ಆಸ್ಪತ್ರೆಯಲ್ಲಿರುವ ಸೋಂಕಿತ ಅಲ್ಲಿಂದಲೇ ವಿಡಿಯೋ ಮಾಡಿ ಚಿಂತೆಯಲ್ಲಿದ್ದ ಪತ್ನಿಯನ್ನು ನಗಿಸಿದ್ದಾರೆ. ಸದ್ಯ ಈ ವಿಡಿಯೋ ಉಡುಪಿ ಭಾಗದಲ್ಲಿ ವೈರಲ್ ಆಗಿದೆ.ಉಡುಪಿ ಜಿಲ್ಲೆಯ ಕೋಟದ ಹೋಟೆಲ್ ಮಾಲೀಕರು ಕೊರೊನಾ ಸೋಂಕಿತರಾಗಿದ್ದಾರೆ. ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಾಲೀಕರಿಗೆ ಸೋಂಕು ತಗುಲಿದ ಹಿನ್ನೆಲೆ ಹೋಟೆಲ್ ಕೆಲಸಗಾರರು, ಗ್ರಾಹಕರು ಮತ್ತು ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ. ಕುಟುಂಬಸ್ಥರಿಗೆ ನಾನು ಚೆನ್ನಾಗಿದ್ದಾನೆ ಎಂದು ವಿಡಿಯೋ ಸಂದೇಶ ಕಳಿಸಿದ್ದಾರೆ. ಹಾಗೆ ರಾಜ್ಕುಮಾರ್ ಅಭಿಮಾನಿಯಾಗಿರುವರಿಂದ ಅವರ ಹಾಡಿಗೆ ಡ್ಯಾನ್ಸ್ ಸಹ ಮಾಡಿದ್ದಾರೆ.
ಗೆಳೆಯರೇ, ಗ್ರಾಹಕರೇ ನಾನು ಚೆನ್ನಾಗಿದ್ದೇನೆ. ಕೊರೊನಾ ಬಗ್ಗೆ ಭಯ ಬೇಡ, ಜಾಗೃತೆ ಇರಲಿ ಎಂದ ಸಂದೇಶವನ್ನ ವಿಡಿಯೋ ಮೂಲಕ ರವಾನಿಸಿದ್ದಾರೆ.
Times Of karkala whatsapp Group link:
ಜಾಹೀರಾತು
Post a comment