ಬೆಳ್ಮಣ್:V5 Technologies ನ ನೂತನ ಶಾಖೆ ಉದ್ಘಾಟಿಸಿದ ಶಾಸಕರು:ಗಣ್ಯರಿಂದ ಶುಭಹಾರೈಕೆ-Times of karkala
ಶ್ರೀ ರಾಮ ಕ್ಷೇತ್ರ, ನಿತ್ಯಾನಂದನಗರ ಧರ್ಮಸ್ಥಳ ಇಲ್ಲಿನ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜೀಯವರ ಶುಭಾಶೀರ್ವಾದದೊಂದಿಗೆ V5 Technologies ನ ನೂತನ ಶಾಖೆ ಇಂದು ಬೆಳ್ಮಣ್ ನ ದಾಮೋದರ ಕಾಂಪ್ಲೆಕ್ಸ್ ನ ಹೋಟೇಲ್ ಉಜಾಲಾ ಬಳಿ ಶುಭಾರಂಭಗೊಂಡಿತು.
ಕಾರ್ಕಳ ಶಾಸಕ ಶ್ರೀ ವಿ ಸುನೀಲ್ ಕುಮಾರ್ ನೂತನ ಶಾಖೆಯನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಕಟಪಾಡಿ, ಬಿರುವೆರ್ ಕುಡ್ಲ(ರಿ.)ಸ್ಥಾಪಕಾದ್ಯಕ್ಷ ಉದಯ್ ಪೂಜಾರಿ ಬಳ್ಳಾಲ್ ಬಾಗ್, ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನ, ಹ್ಯುಮಾನಿಟಿ ಟ್ರಸ್ಟ್ ಸ್ಥಾಪಕ ರೋಷನ್ ಬೆಳ್ಮಣ್, ಬಂಗಾಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೊರ್ತಾಜೆ, ಉದ್ಯಮಿ ಪ್ರಸಾದ್ ಶೆಟ್ಟಿ ಕೋಡಿಕಂಬಳ, ದಾಮೋದರ ಕಾಂಪ್ಲೆಕ್ಸ್ ಮಾಲೀಕ ಕೇಶವರಾಯ,ಉದ್ಯಮಿ ಜೋಯಲ್ ಅರನ್ನ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ.ಪೂಜಾರಿ ಕಾರ್ಯಕ್ರಮ ನಿರ್ವಹಣೆಗೈದರು.
Post a comment