►► ಟಿಕ್ಟಾಕ್ ಸಹಿತ 59 ಚೀನಾ ಆ್ಯಪ್ಗಳಿಗೆ ಭಾರತದಲ್ಲಿ ಎಳ್ಳು ನೀರು ಬಿಟ್ಟ ಮೋದಿ ಸರಕಾರ ನಡೆ
►► "ಆತ್ಮನಿರ್ಭರ ಸಂಕಲ್ಪಕ್ಕೆ ಕೈ ಜೋಡಿಸೋಣ" ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ
ಉಡುಪಿ: ಟಿಕ್ ಟಾಕ್ ಸಹಿತ 59 ಆಪ್ ಗಳಿಗೆ ಎಳ್ಳುನೀರು
ಬಿಟ್ಟಿರವುದು ನರೇಂದ್ರ ಮೋದಿ ಸರಕಾರದ ದಿಟ್ಟ ನಡೆ, ಆದುದರಿಂದ ಭಾರತೀಯರಾದ ನಾವೆಲ್ಲರೂ ಆತ್ಮ ನಿರ್ಭರ
ಸಂಕಲ್ಪಕ್ಕೆ ಕೈಜೋಡಿಸೋಣ ಎಂದು ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದ ಮೇಲೆ ಪದೇ ಪದೇ ಗಡಿ ರೇಖೆಯಲ್ಲಿ ಉದ್ದಟತನ ತೊರುತಿದ್ದ ಚೀನಾಕೆ ನಮ್ಮ ಸೈನಿಕರು ಮರೆಯಲಾಗದ ರೀತಿಯಲ್ಲಿ ಪ್ರತ್ಯತ್ತರ ನೀಡಿದ ನಂತರ ದೇಶದಾದ್ಯಂತ ನಾಗರಿಕರು ಸ್ವತಃ ಚೀನಾ ವಸ್ತುಗಳನ್ನು ತಿರಸ್ಕರಿಸಲು ಸ್ವಯಂ ನಿರ್ದಾರ ತಗೊಂಡಾರಾದರು ಚೀನಾಕೆ ದಿನನಿತ್ಯ ಲಾಭವನ್ನ ಮಾಡುವಂತಹ ಚೈನಾ ಆ್ಯಪ್ ಗಳನ್ನ ತಿರಸ್ಕರಿಸುವಲ್ಲಿ ಹಿಂದೆ ಮುಂದೆ ನೊಡಲಾರಂಬಿಸಿದರು,ಆದರೆ ಈಗ ಸರಕಾರವೇ ದಿಟ್ಟ ಹೆಜ್ಜೆಯೊಂದಿಗೆ ಭಾರತೀಯ ಯುವಕ ಯುವತಿಯರ ಸಮಯವನ್ನ ವ್ಯತಾ ವ್ಯರ್ಥ ಮಾಡುತ್ತಾ ಇದ್ದಂತಹ ಟಿಕ್ ಟಾಕ್ ಸಹಿತ 59 ಚೀನಾ ಆ್ಯಪ್ ಗಳನ್ನ ಬ್ಯಾನ್ ಮಾಡಿ ಬಾರತೀಯರ ಭಾರತದ ಪರ ಉತ್ಪಾದಕತೆ ಹೆಚ್ಚಿಸುವ ಹಾಗು ಚೀನಾಕೆ ಆರ್ಥಿಕ ವಾಗಿ ಪೆಟ್ಟನ್ನ ನೀಡಲು ದಿಟ್ಟ ಹೆಜ್ಜೆಯನ್ನ ಇಟ್ಟಿದೆ.
ಇಂತಹ ಒಂದು ಸುಸಂಧರ್ಬದಲ್ಲಿ ಭಾರತಿಯರಾದ ನಾವು ನಮ್ಮ ನೆಚ್ಚಿನ ಪ್ರದಾನಿಯವರ ಆತ್ಮನಿರ್ಭರ ಬಾರತದ ಸಂಕಲ್ಪಕ್ಕೆ ಕೈ ಜೊಡಿಸಿ ಆದಷ್ಟು ಸ್ವದೇಶಿ ವಸ್ತುಗಳನ್ನು ಬಳಸುವ ಸ್ವದೇಶಿ ಅ್ಯಪ್ಗಳನ್ನ ಬಳಸುವ ಮೂಲಕ ಭಾರತದ ಆರ್ಥಿಕತೆಗೆ ಸದೃಡಗೊಳಿಸಲು ನಮ್ಮ ಕೊಡುಗೆಯನ್ನು ನೀಡುವ ಎಂದು ಅವರು ಹೇಳಿದರು.
ಜಾಹೀರಾತು
ಜಾಹೀರಾತು
ಜಾಹೀರಾತು

Post a comment