ಕೊರೋನಾ ವಾರಿಯರ್ಸ್ ಜೊತೆ ಸ್ವಾತಂತ್ರೋತ್ಸವ,ಸ್ವಯಂ ಪ್ರೇರಿತ ರಕ್ತದಾನ.ಮೇಕ್ ಸಮ್ 1 ಸ್ಮೈಲ್ ತಂಡದ ವಿನೂತನ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ-Times of karkala
ಮೂಡುಬಿದಿರೆ,ಆ.16: ಸ್ವಾತಂತ್ರ್ಯ ದಿನದಂದು ಬಹುತೇಕ ಸಂಘ ಸಂಸ್ಥೆಗಳು ಒಂದಲ್ಲ ಒಂದು ಕೆಲಸಗಳನ್ನು ಮಾಡುತ್ತಲೇ ಇರುತ್ತವೆ.ಆದರೆ ಈ ತಂಡ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ವಿನೂತನ ಕಾರ್ಯವನ್ನು ಮಾಡಿದೆ.
ಈ ಬಾರಿಯ ಸ್ವಾತಂತ್ರೋತ್ಸವವನ್ನು ಕೊರೋನಾ ವಾರಿಯರ್ಸ್ ಜೊತೆ ಸಂಭ್ರಮಿಸಿದ ಮೇಕ್ ಸಮ್ 1 ಸ್ಮೈಲ್ ತಂಡ ಮೂಡುಬಿದಿರೆ ವ್ಯಾಪ್ತಿಯ 74 ಆಶಾ ಕಾರ್ಯಕರ್ತರಿಗೆ ಕೊಡೆ ಬ್ಯಾಗ್ ಹಾಗೂ ಇನ್ನಿತರ ಉಪಯೋಗ ವಸ್ತುಗಳನ್ನು ನೀಡಿ ಕೊರೋನಾ ವಾರಿಯರ್ಸ್ ಗಳ ಕೆಲಸಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ.
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೂಡುಬಿದಿರೆಯ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್ ಮೇಕ್ ಸಮ್ ಒನ್ ಸ್ಮೈಲ್ ತಂಡ ಮಾಡಿಕೊಂಡು ಬರುತ್ತಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉದ್ಯಮಿ ರಂಜಿತ್ ಪೂಜಾರಿ, ಪುರಸಭೆ ಸದಸ್ಯ ರಾಜೇಶ್ ನಾಯಕ್, ಇರ್ಫಾನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಮುಗಿದ ಬಳಿಕ ಮೇಕ್ ಸಮ್ 1 ಸ್ಮೈಲ್ ತಂಡದ ಸದಸ್ಯರು ಸ್ವಯಂ ಪ್ರೇರಿರತಾಗಿ ಕೆ ಎಂ ಸಿ ಮಣಿಪಾಲ ಇಲ್ಲಿ ರಕ್ತದಾನಗೈದರು.
Post a comment