ಇನ್ನಾ:ಮೂಳೆ ಮುರಿತಕ್ಕೊಳಗಾದ ಅನ್ಯಧರ್ಮದ ವೃದ್ಧೆಯನ್ನು ಕಾಡಿನಿಂದ 1 ಕಿ.ಮೀ ಹೊತ್ತು ಆಸ್ಪತ್ರೆಗೆ ಸೇರಿಸಿದ ಭಜರಂಗದಳ ಕಾರ್ಯಕರ್ತರು-Times of karkala

ಇನ್ನಾ:ಮೂಳೆ ಮುರಿತಕ್ಕೊಳಗಾದ ವೃದ್ಧೆಯನ್ನು ಕಾಡಿನಿಂದ 1 ಕಿ.ಮೀ ಹೊತ್ತು ಆಸ್ಪತ್ರೆಗೆ ಸೇರಿಸಿದ ಭಜರಂಗದಳ ಕಾರ್ಯಕರ್ತರು-Times of karkala ಇನ್ನಾ,ಆ.19:ಇನ್ನ ಗ್ರಾಮದ ಸಾಂತೂರು ಕೊಪ್ಲ ನಿವಾಸಿ ಮಗ್ಗಿ ಬಾಯಿ ಎಂಬ 85 ವರ್ಷ ಪ್ರಾಯದ ವೃದ್ದೆಯು ವಾಸವಾಗಿದ್ದು ಒಂದು ದಿನದ ಹಿಂದೆ ಜಾರಿ ಬಿದ್ದು ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿದ್ದರು.ಮನೆಯಿಂದ ಹೊರಬಾರಲಾಗದ ಪರಿಸ್ಥಿತಿಯಲ್ಲಿ ಇದ್ದು ಅವರ ಮಗಳಾದ ಸವಿತಾ ಅವರು ಅಸಹಾಯಕರಾಗಿ ಭಜರಂಗದಳ ಕಾರ್ಯಕರ್ತರಲ್ಲಿ  ಸಹಾಯ ಯಾಚಿಸಿದಾಗ ತಕ್ಷಣವೇ ಕಾರ್ಯಪ್ರವತ್ತರಾದ ಭಜರಂಗದಳದ ಕಾರ್ಯಕರ್ತರು  ಅವರ ಮನೆಗೆ ತೆರಳಿ ಸುಮಾರು ಒಂದು ಕಿಲೋ ಮೀಟರ್ ನ ಕಾಡಿನೊಳಗಿನ ಕಡಿದಾದ ರಸ್ತೆಯಲ್ಲಿ ಹೊತ್ತುಕೊಂಡು ನಂತರ ವಾಹನದಲ್ಲಿ ಪಡುಬಿದ್ರಿಯ ಖಾಸಗಿ  ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ನಂತರ ಖುದ್ದಾಗಿ ಆಸ್ಪತ್ರೆಗೆ ಹೋಗಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ದೊರಕುವಂತೆ ಮಾಡಿದ್ದಾರೆ.

ಇನ್ನಾ ಗ್ರಾಮದ ಕಾಂಜರಕಟ್ಟೆಯಲ್ಲಿ ನೂತನವಾಗಿ ರಚನೆಗೊಂಡ ಮಾತೃಭೂಮಿ ಘಟಕದ ಭಜರಂಗದಳ ಕಾರ್ಯಕರ್ತರು ಅನ್ಯ ಸಮುದಾಯದ ಮಹಿಳೆಯೋರ್ವರನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದು  ಕೆಲಸವು ಸಾಮಾಜಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೊಳಗಾಗಿದೆ 

ಮಾತೃಭೂಮಿ ಘಟಕದ  ವಿಶ್ವಹಿಂದೂಪರಿಷದ್ ನ ಅಧ್ಯಕ್ಷರಾದ ಶ್ರೀನಿವಾಸ್ ಕಡೆಕುಂಜಉಪಾಧ್ಯಕ್ಷರಾದ ಸುರೆಂದ್ರ ಸೇರ್ವೆಗಾರ್,ಕಾರ್ಯದರ್ಶಿ ಅಲಗೇಶ್,ಸಂಚಾಲಕರಾದ ಅನಂದ್ ಸೇವಾ ಪ್ರಮುಖ್ ಶ್ರಿಕಾಂತ್ ಆಚಾರ್ಯ,ಕಾರ್ಯಕರ್ತರಾದಜಯಂತ್ ಆಚಾರ್ಯ ,ಸುನಿಲ್,ರಿಕ್ಷಾ ಚಾಲಕರಾದ ಪ್ರದೀಪ್ ಈ ಸಂಧರ್ಭದಲ್ಲಿ ಹಾಜರಿದ್ದರು.


 

ಜಾಹೀರಾತು
 


  Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget