ಹೆಬ್ರಿ:ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊರೊನಾ ನಿರ್ಮೂಲನೆಗಾಗಿ ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ ಕಾರ್ಯಕ್ರಮಕ್ಕೆ ಹೆಬ್ರಿಯಲ್ಲಿ ಚಾಲನೆ
28 ಜನರ ಕೊರೊನಾ ವಾರಿಯರ್ಸ್ ತಂಡದಿಂದ ಕಾಂಗ್ರೆಸ್ ಆರೋಗ್ಯ ಅಭಯಹಸ್ತ ಕಾರ್ಯಕ್ರಮ.
ಹೆಬ್ರಿ,ಆ.30: ಕೊರೊನಾ ನಿರ್ಮೂಲನೆಗಾಗಿ ಕೆಪಿಸಿಸಿ ರೂಪಿಸಿರುವ ವಿನೂತನ ಕಾಂಗ್ರೆಸ್ ಆರೋಗ್ಯ ಅಭಯಹಸ್ತ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ನ ಮೊದಲ ಯಶಸ್ವಿ ಕಾರ್ಯಕ್ರಮ ಕ್ಕೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾನುವಾರ ಹೆಬ್ರಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ 28 ಯುವಕ ಯುವತಿಯರು ಕಾಂಗ್ರೆಸ್ ಆರೋಗ್ಯ ಅಭಯಹಸ್ತ ಸೇವಾ ಕಾರ್ಯದ ವಾರಿಯರ್ಸ್ ಆಗಿ ಸೇವೆಸಲ್ಲಿಸುವರು. ಮುದ್ರಾಡಿ ಡಾ.ಪ್ರದೀಪ್ ಕುಮಾರ್ ಶೆಟ್ಟಿ, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಡಾ.ಯಶ್ ಶ್ರೀ,ಕಾಂಗ್ರೇಸ್ ನಾಯಕಿ ಡಾ.ಸುನೀತಾ ಶೆಟ್ಟಿ ವ್ಯೆದ್ಯರಾಗಿ ವಿಶೇಷ ಸೇವೆ ನೀಡುವರು.ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಅವರ ವಿಶೇಷ ಮುತುವರ್ಜಿಯಿಂದ ಕಾರ್ಯಕ್ರಮ ನಡೆಯುತ್ತಿದೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಕಾಂಗ್ರೇಸ್ ಆರೋಗ್ಯ ಅಭಯಹಸ್ತ ಸೇವಾ ಕಾರ್ಯವನ್ನು ಉದ್ಘಾಟಿಸಿ ಕಾಂಗ್ರೆಸ್ ಶಾಶ್ವತವಾಗಿ ಜನರ ನಡುವೆ ಜನರಿಗಾಗಿಯೇ ಇರುವ ಪಕ್ಷ, ಕೊರೊನಾ ಮಹಾಮಾರಿಯ ಸಂಕಷ್ಟದ ಕಾಲದಲ್ಲಿಯೂ ಕಾಂಗ್ರೆಸ್ ಜನರ ಆರೋಗ್ಯದ ಸೇವೆಗಾಗಿ ತನ್ನ ತಂಡವನ್ನು ಕಟ್ಟಿಕೊಂಡು ಶ್ರಮಿಸುತ್ತಿದೆ.ಆರೋಗ್ಯ ಸೇವೆಯ ಉಡುಪಿ ಜಿಲ್ಲೆಯ ಮೊದಲ ಕಾರ್ಯಕ್ರಮ ವು ಹೆಬ್ರಿಯಿಂದ ಆರಂಭಗೊಂಡಿದ್ದು ಎಲ್ಲರ ಸಹಕಾರ ದಲ್ಲಿ ಯಶಸ್ವಿಯಾಗಿ ನಡೆಯಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಎಲ್ಲರೂ ಕ್ಯೆಜೋಡಿಸಿ ಆರೋಗ್ಯ ಅಭಯಹಸ್ತ ಸೇವಾ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕಾಂಗ್ರೇಸ್ ನಾಯಕಿ ಡಾ.ಸುನೀತಾ ಡಿ.ಶೆಟ್ಟಿ ಕಾಂಗ್ರೇಸ್ ಆರೋಗ್ಯ ಅಭಯಹಸ್ತ ಕಾರ್ಯಕ್ರಮ ದ ಸಮಗ್ರ ಮಾಹಿತಿ ನೀಡಿದರು. ಡಾ. ಯಶಶ್ರೀ,ಡಾ.ಸುನೀತಾ ಡಿ.ಶೆಟ್ಟಿ, ಡಾ.ಪ್ರದೀಪ್ ಕುಮಾರ್ ಶೆಟ್ಟಿ, ಡಿಸಿಸಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮತ್ತು ಹೆಬ್ರಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಚಂದ್ರಹಾಸ್ ಅವರನ್ನು ಸನ್ಮಾನಿಸಲಾಯಿತು.
ಕೆಪಿಸಿಸಿಯ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಉಸ್ತುವಾರಿ ಉಮರ್ ಫಾರೂಕ್ ಪರಂಗಿಪೇಟೆ, ಕಾಂಗ್ರೆಸ್ ಆರೋಗ್ಯ ಅಭಯಹಸ್ತ ಕಾರ್ಯಕ್ರಮದ ಉಸ್ತುವಾರಿ ರಮೇಶ್ ಎನ್.ಶೆಟ್ಟಿ, ಬಾಲಕೃಷ್ಣ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ನೀರೆ ಕ್ರಷ್ಣ ಶೆಟ್ಟಿ, ಯುವ ಮುಖಂಡ ಎಚ್.ಪ್ರದೀಪ್ ಭಂಡಾರಿ, ಕಾರ್ಕಳ ದ ಉದಯ ಶೆಟ್ಟಿ ಕುಕ್ಕುಂದೂರು, ಮಧುರಾಜ್ ಶೆಟ್ಟಿ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ ಆಚಾರ್ಯ, ವಿವಿಧ ಘಟಕಗಳ ಪ್ರಮುಖರಾದ ಕೆರ್ವಾಸೆ ಪ್ರಕಾಶ ಪೂಜಾರಿ. ಸಂತೋಷ ನಾಯಕ್ ಕನ್ಯಾಯ, ಸುಂದರ ಶಿರೂರು, ರಾಘವ ದೇವಾಡಿಗ, ಹೆಚ್.ಬಿ.ಸುರೇಶ್ ಹೆಬ್ರಿ,ಶೀನಾ ಪೂಜಾರಿ ಹೆಬ್ರಿ, ಲಕ್ಷ್ಮಣ ಆಚಾರ್ಯ, ಚಂದ್ರಶೇಖರ ಬಾಯರಿ, ಶಶಿಕಲಾ ಆರ್,ಪಿ, ಶಶಿಕಲಾ ಡಿ. ಪೂಜಾರಿ ಮುದ್ರಾಡಿ , ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ಧನ್ ಸೇರಿದಂತೆ ವಿವಿಧ ಪ್ರಮುಖರು ಉಪಸ್ಥಿತರಿದ್ದರು.ಚ್ಯೆತ್ರ ಕಬ್ಬಿನಾಲೆ ಕಾರ್ಯಕ್ರಮ ನಿರೂಪಿಸಿದರು.ಅಶ್ವಿನಿ ಶೆಟ್ಟಿ ಸ್ವಾಗತಿಸಿ ವಂದಿಸಿದರು.
Post a comment