ಪಡುಬಿದ್ರೆ:ಗಿಫ್ಟ್ ಹೆಸರಲ್ಲಿ 3,53,000 ರೂಪಾಯಿ ವಂಚನೆ!-Times of karkala

ಪಡುಬಿದ್ರೆ:ಗಿಫ್ಟ್ ಹೆಸರಲ್ಲಿ 3,53,000 ರೂಪಾಯಿ ವಂಚನೆ!-Times of karkala 


ಪಡುಬಿದ್ರಿ,ಆ.29:ಪಡುಬಿದ್ರಿಯ ವ್ಯಕ್ತಿಯೋರ್ವರು ದುಬಾರಿ ಗಿಫ್ಟ್ ನಂಬಿ 3,53,000 ರೂಪಾಯಿ ಕಳೆದುಕೊಂಡ  ಘಟನೆ ನಡೆದಿದೆ  ಪಡುಬಿದ್ರೆ ನಡ್ಸಾಲ್ ಗ್ರಾಮದ ಡೇವಿಡ್ ಪೌಲ್‌ ಕುಮಾರ್‌ (53)  ಮೋಸ ಹೋದವರಾಗಿದ್ದಾರೆ.

ಮುಲ್ಕಿಯ ಪ್ರಾರ್ಥನಾಲಯಕ್ಕೆ ಸಂಬಂಧಿಸಿದ ಕಂಪೆನಿಯಲ್ಲಿ ಡೇವಿಡ್ ಪೌಲ್ ಕೆಲಸಕ್ಕಿದ್ದು, ಫೇಸ್ ಬುಕ್ ಬಳಸುತ್ತಿದ್ದರು. ಅವರಿಗೆ ಆಗಸ್ಟ್ 24ರಂದು ಫೇಸ್ ಬುಕ್ ನಲ್ಲಿ ಜೊನ್ ಶರ್ರಿ ಮಾಕ್ಸ್ ವೆಲ್ ಎಂಬ ಹೆಂಗಸು ಪರಿಚಯವಾಗಿ ನಂಬಿಸಿ ತಾನು ತನ್ನ ಹುಟ್ಟು ಹಬ್ಬಕ್ಕೆ ಬೆಲೆ ಬಾಳುವ ಗಿಫ್ಟ್ ಪಾರ್ಸೆಲ್ ಕಳುಹಿಸುವುದಾಗಿ ಹೇಳಿದ್ದಳು.

ಅದರಂತೆ ದೆಹಲಿ ಏರ್ ಪೋರ್ಟ್ ನಿಂದ ಮಹಿಳೆಯೊಬ್ಬರು ಕರೆ ಮಾಡಿ, ವಿದೇಶದಿಂದ ಪಾರ್ಸೆಲ್ ಬಂದಿದೆ, ಅದನ್ನು ಕಳುಹಿಸಬೇಕಾದರೆ 58,000 ರೂಪಾಯಿ ಪಾವತಿಸಬೇಕಾಗಿ ಹೇಳಿ, ಬ್ಯಾಂಕ್ ಖಾತೆ ವಿವರ ನೀಡಿದ್ದರು. ಅದನ್ನು ನಂಬಿದ ಡೇವಿಡ್ ಪೌಲ್ ಆ ಖಾತೆಗೆ ಆ ಹಣವನ್ನು ವರ್ಗಾಯಿಸಿದ್ದರು.

ನಂತರ ಯಾರೋ ಹೆಂಗಸು ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಂದು ಹೇಳಿ ಆದಾಯ ತೆರಿಗೆ ಕ್ಲಿಯರೆನ್ಸ್ ಬಗ್ಗೆ ಹಣ ಕಟ್ಟಬೇಕು ಎಂದು ಹೇಳಿ ಬ್ಯಾಂಕ್ ಖಾತೆ ವಿವರ ನೀಡಿದ್ದು, ಅದರಂತೆ ಆ ಖಾತೆಗೆ 2,95,000 ರೂಪಾಯಿ ಹಣವನ್ನು ವರ್ಗಾಯಿಸಿದ್ದು,ಡೇವಿಡ್ ಪೌಲ್ ಒಟ್ಟು 3,53,000 ರೂಪಾಯಿ ಹಣವನ್ನು ವಂಚನೆಯಿಂದ ಬ್ಯಾಂಕ್ ಮೂಲಕ ಪಡೆದು, ಪಾರ್ಸೆಲ್ ಕಳುಹಿಸದೇ, ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಜಾಹೀರಾತು


































Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget