ಕಾರ್ಕಳ:ಭೂಸುಧಾರಣೆ ಮಸೂದೆ ತಿದ್ದುಪಡಿ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ-Times of karkala

ಕಾರ್ಕಳ:ಭೂಸುಧಾರಣೆ ಮಸೂದೆ ತಿದ್ದುಪಡಿ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ-Times of karkala  

ಕಾರ್ಕಳ,ಆ 20:ಭೂಸುಧಾರಣ ಮಸೂದೆ ತಿದ್ದುಪಡಿ , ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆಯ ತಿದ್ದುಪಡಿಗಳು ರೈತ ಹಾಗೂ ಕಾರ್ಮಿಕ ವಿರೋಧಿಯಾಗಿದ್ದು  ಇವುಗಳನ್ನು ಕೂಡಲೇ  ಹಿಂತೆಗೆದುಕೊಳ್ಳ ಬೇಕೆಂದು ಒತ್ತಾಯಿಸಿ  ಕಾರ್ಕಳ ಬ್ಲಾಕ್ ಸಮಿತಿ ಗುರುವಾರ ಪ್ರತಿಭಟನೆ  ನಡೆಸಿತು. 

ಪ್ರತಿಭಟನೆಯ ನಂತರ ರಾಜ್ಯಪಾಲರಿಗೆ ತಹಶೀಲ್ದಾರ್ ಮೂಲಕ ಮನವಿ ನೀಡಲಾಯಿತು. ರಾಜ್ಯದಲ್ಲಿ  ಪ್ರವಾಹದಿಂದ  ಆಗಿರುವ ತೀವ್ರ ಹಾನಿಗೆ ಪರಿಹಾರ ಒದಗಿಸಲು ವಿಫಲವಾಗಿರುವ  ಸರಕಾರದ ಕಾರ್ಯವೈಖರಿಯನ್ನು  ಖಂಡಿಸಿ ಹಾಗೂ ಕೊರೋನಾ ನಿಯಂತ್ರಣದಲ್ಲಿ ನಡೆದ ವ್ಯಾಪಕ ಭ್ರಷ್ಠಾಚಾರದ ವಿಷಯದಲ್ಲಿ ಉಚ್ಚ ನ್ಯಾಯಾಲಯದ ಹಾಲೀ ನ್ಯಾಯಾದೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೂಡ ಕಾಂಗ್ರೆಸ್  ಒತ್ತಾಯಿಸಿತು. 

ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಕರಮಡಿವಾಳ, ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್,ಡಿಸಿಸಿ ಸದಸ್ಯ ಸಿರಿಯಣ್ಣ ಶೆಟ್ಟಿ, ಉಧ್ಯಮಿ ಉಪೇಂದ್ರ ನಾಯಕ್, ಕೆಪಿಸಿಸಿ ಕಿಸಾನ್ ಘಟಕ ಕಾರ್ಯದರ್ಶಿ ಉದಯ ಶೆಟ್ಟಿ, ವಕ್ತಾರ ನಕ್ರೆ ಬಿಪಿನಚಂದ್ರಪಾಲ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಆರೀಫ್ ಕಲ್ಲೊಟ್ಟೆ , ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಹಿಂದುಳಿದ ವರ್ಗದ ಅದ್ಯಕ್ಷ ಕುಶ ಮೂಲ್ಯ,  ರಾಜೇಶ್ ದೇವಾಡಿಗ, ರಾಜೇಂದ್ರ ಕಾರ್ಕಳ, ಪುರಸಭಾ ಸದಸ್ಯರಾದ ಶುಭದಾರಾವ್, ಹರೀಷ್ ಕುಮಾರ್, ವಿನ್ನಿ ಬೋಲ್ಡ್, ಮಾಜಿ ಮಹಿಳಾಧ್ಯಕ್ಷೆ ಮಾಲಿನಿ ರೈ, ವಿನ್ನಿ ಡಿ'ಸೋಜ, ಮಾಜಿ ಪುರಸಭಾ ಸದಸ್ಯರಾದ ನವೀನ್ ದೇವಾಡಿಗ, ವಿವೇಕಾನಂದ ಶೆಣೈ, ಸುನೀಲ್ ಕುಮಾರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು

 

ಜಾಹೀರಾತು




 


  








Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget