ಮಿಯ್ಯಾರು ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ತಾರಾನಾಥ ಕೋಟ್ಯಾನ್ ನೇಮಕ-Times Of Karkala

ಮಿಯ್ಯಾರು: ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ  ತಾರಾನಾಥ ಕೋಟ್ಯಾನ್  ನೇಮಕ-Times Of Karkala

ಕಾರ್ಕಳ,ಆ ೨೦: ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡ ಮತ್ತು ಕಾರ್ಯಕರ್ತರೊಂದಿಗಿನ  ಚರ್ಚೆಯ ನಂತರ  ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಶೇಖರ ಮಡಿವಾಳ ಮುಂದಾಳತ್ವದಲ್ಲಿ  ಈ ನೇಮಕಾತಿ ನಡೆದಿದೆ.  

ಮಿಯ್ಯಾರು ಮಧುವನ್ ಗಾರ್ಡನ್ ನಲ್ಲಿ ಮಂಗಳವಾರದಂದು ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ನೂತನ ಅಧ್ಯಕ್ಷ ತಾರಾನಾಥ ಕೋಟ್ಯಾನ್ ರಿಗೆ ನಿಕಟ ಪೂರ್ವ ಅಧ್ಯಕ್ಷ ರಾದ ಜೆರಾಲ್ಡ್ ಡಿಸಿಲ್ವರವರು ಅಧಿಕಾರ ಹಸ್ತಾಂತರಿಸಿದರು. ಈ ವೇಳೆ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಶೇಖರ ಮಡಿವಾಳ, ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ನವೀನ ದೇವಾಡಿಗ, ನಗರ ಕಾಂಗ್ರೆಸ್ ಅಧ್ಯಕ್ಷ  ಮಧುರಾಜ್ ಶೆಟ್ಟಿ, ಮಾಜಿ ಪುರಸಭಾ ಸದಸ್ಯ ಸುನಿಲ್ ಕೋಟ್ಯಾನ್,ಜೆರಾಲ್ಡ್ ಡಿಸಿಲ್ವ, ಡೇನಿಯಲ್ ರೇಂಜರ್, ಶೇಖ್ ಶಬ್ಬೀರ್, ತಾರಾನಾಥ್ ಕೋಟ್ಯಾನ್, ಸೂರು , ಬ್ರಿಯಾನ್ ಪಾಯಸ್, ರಾಜೇಶ್ ನೆಲ್ಸನ್ ಡಿಸೋಜ, ಮಂಜುನಾಥ್ ಕೋಟ್ಯಾನ್, ಗಣೇಶ್ ಆಚಾರ್ಯ, ನಿತೇಶ್ ಕೋಟ್ಯಾನ್, ಸುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

 

ಜಾಹೀರಾತು




 


  







Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget