ಐವಾನ್ ಡಿಸೋಜಾ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು:ಡಿ.ಕೆ.ಶಿ, ಯು.ಟಿ.ಖಾದರ್ ಗೂ ಆತಂಕ-Times of karkalaಜಾಹೀರಾತು 

ಜಾಹೀರಾತು 

 ಜಾಹೀರಾತು 

 ಜಾಹೀರಾತು 
 ಜಾಹೀರಾತು 

  ಜಾಹೀರಾತು 
  
ಜಾಹೀರಾತು 
 

ಐವಾನ್ ಡಿಸೋಜಾ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು:ಡಿ.ಕೆ.ಶಿ, ಯು.ಟಿ.ಖಾದರ್ ಗೂ ಆತಂಕ-Times of karkala 

ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.


ಈ ಕುರಿತು ಅವರು ಫೇಸ್ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ನನಗೆ ಹಾಗೂ ನನ್ನ ಪತ್ನಿ ಡಾ.ಕವಿತಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಮಗೆ ಯಾವುದೇ ಲಕ್ಷಣಗಳು ಇರಲಿಲ್ಲ. ಆದರೂ ಸ್ವಯಂಪ್ರೇರಿತರಾಗಿ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಂಡೆವು. ಈ ವೇಳೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಸ್ನೇಹಿತರು ಹಾಗೂ ಬೆಂಬಲಿಗರು ನಮ್ಮನ್ನು ಭೇಟಿಯಾಗಲು ಬರಬಾರದು ಎಂದು ಮನವಿ ಮಾಡುತ್ತೇನೆ. ನಿಮ್ಮ ಪ್ರಾರ್ಥನೆ, ಹಾರೈಕೆಯೇ ನಮಗೆ ಶಕ್ತಿ ಎಂದು ಬರೆದುಕೊಂಡಿದ್ದಾರೆ.


ಐವಾನ್ ಡಿಸೋಜಾ ಪತ್ನಿ ಖಾಸಗಿ ಆಸ್ಪತ್ರೆಯ ವೈದ್ಯೆಯಾಗಿದ್ದು, ಅವರಿಗೂ ಸೋಂಕು ತಗುಲಿದೆ. ಇಷ್ಟೇ ಅಲ್ಲದೆ ಇನ್ನೂ ಭಯಾನಕ ವಿಚಾರವೆಂದರೆ ನಿನ್ನೆಯಷ್ಟೇ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಜೊತೆಗೆ ಐವಾನ್ ಡಿಸೋಜಾ ಸಹ ಭಾಗವಹಿಸಿದ್ದರು. ಹೀಗಾಗಿ ಇದೀಗ ಹಲವು ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವರಿಗೆ ಕೊರೊನಾ ಸೋಂಕು ತಗುಲುವ ಆತಂಕ ಎದುರಾಗಿದೆ.


ಕಾರ್ಯಕ್ರಮದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಹ ಐವಾನ್ ಡಿಸೋಜಾ ಅವರು ಡಿಕೆಶಿ ಜೊತೆಗಿದ್ದರು. ಅಲ್ಲದೆ ಯು.ಟಿ.ಖಾದರ್ ಪಕ್ಕದಲ್ಲಿಯೇ ನಿಂತಿದ್ದರು. ಹೀಗಾಗಿ ಐವಾನ್ ಜೊತೆಗಿದ್ದ ಕಾಂಗ್ರೆಸ್ ನಾಯಕರಿಗೆ ಕ್ವಾರಂಟೈನ್ ಟೆನ್ಷನ್ ಕಾಡುತ್ತಿದೆ. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಯು.ಟಿ.ಖಾದರ್, ರಮಾನಾಥ್ ರೈ ಸೇರಿದಂತೆ ಹಲವು ಮುಖಂಡರಿಗೆ ಆತಂಕ ಎದುರಾಗಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget