ಉಡುಪಿ:ನಿರ್ಗತಿಕರಿಗೆ ಕಂಬಳಿ ವಿತರಿಸಿ ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್-Times Of Karkala

ಉಡುಪಿ:ನಿರ್ಗತಿಕರಿಗೆ ಕಂಬಳಿ ವಿತರಿಸಿ ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ  ಆಚರಿಸಿದ ಜಿಲ್ಲಾ ಯುವ  ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್-Times Of Karkala



ಉಡುಪಿ,ಆ 20 :ನಗರದಲ್ಲಿ ಕಳೆದ ಕೆಲವಾರು ದಿನಗಳಿಂದ  ಎಡೆಬಿಡದೇ ನಿರಂತರವಾಗಿ ಸುರಿಯುತ್ತಿರುವ ಮಳೆಯು ನಿರ್ಗತಿಕರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಸ್ವಂತಕ್ಕೊಂದು ಮನೆಯಿಲ್ಲದೇ ದಿನವಿಡಿ ಬಿಕ್ಷೆ ಬೇಡುತ್ತಾ ನಗರವಿಡೀ ಅಲೆದಾಡಿ ಸಂಜೆಯಾಗುತ್ತಲೆ ಉಡುಪಿ ನಗರದ ಅಂಗಡಿ ಮುಂಗಟ್ಟುಗಳ, ಬಸ್ಟ್ಯಾಂಡ್  ಬದಿಯನ್ನೇ ಉಳಿದುಕೊಳ್ಳುವ ತಾಣವಾಗಿ ಆಶ್ರಯಿಸಿರುವ ಅನೇಕ ಅನಾಥರು ಈ ಸುರಿಯುವ ಮಳೆಯಿಂದ ಚಳಿಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಹೆಣಗಾಡುತ್ತಿದ್ದಾರೆ.
 
ಈ ಎಲ್ಲಾ ನಿರ್ಗತಿಕರಿಗೂ   ಸ್ವಾತಂತ್ರ್ಯ ದಿನದಂದು ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್.ವಿ.ಅಮೀನ್ ಕಂಬಳಿ  ಹೊದಿಕೆಗಳನ್ನು ಹಂಚಿದರು.  ಪ್ರತಿಯೊಬ್ಬ ಪ್ರಜೆಯೂ ಉಳಿದುಕೊಳ್ಳಲು ಸೂರು, ಉಣ್ಣಲು ಅನ್ನ, ಉಟ್ಟುಕೊಳ್ಳಲು ಬಟ್ಟೆ ಈ ಮೂರು ಮೂಲಭೂತ ಆದ್ಯತೆಯಿಂದ ವಂಚಿತರಾಗಬಾರದು ಎನ್ನುವ ಸಂವಿಧಾನದ ಆಶಯವನ್ನು ಅವರು  ಎತ್ತಿ ಹಿಡಿದರು.  

ಈ ಸಂದರ್ಭದಲ್ಲಿ ವಿಶ್ವಾಸ್ ಅಮೀನ್ ಜೊತೆಯಲ್ಲಿ ಝಮೀರ್, ಹಮದ್  ಉಪಸ್ಥಿತರಿದ್ದರು.

ಜಾಹೀರಾತು




 


  







Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget