ರಾಜೀವ್ ಗಾಂಧಿ,ದೇವರಾಜ್ ಅರಸು ಸಂಸ್ಮರಣೆ -Times Of Karkala

 ರಾಜೀವ್  ಗಾಂಧಿ,ದೇವರಾಜ್ ಅರಸು ಸಂಸ್ಮರಣೆ -Times Of Karkala

ಕಾರ್ಕಳ,ಆ 20:ತಂತ್ರಜ್ಞಾನದ ಮೂಲಕ  ದೇಶದ ಸಮಗ್ರ ಆಡಳಿತಕ್ಕೆ ಹೊಸ ರೂಪು  ನೀಡಿದ ಹಾಗೂ ಪಂಚಾಯತ್ ರಾಜ್  ಮಸೂದೆ  ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯೂ ತಳಮಟ್ಟದ ಆಡಳಿತ ವ್ಯವಸ್ಥೆಯಲ್ಲಿ  ಭಾಗವಹಿಸುವ ಅವಕಾಶವನ್ನು ಮಾಡಿಕೊಟ್ಟ ಮಾಜಿ ಪ್ರಧಾನಿ ರಾಜೀವ ಗಾಂಧಿ ಆಧುನಿಕ ಭಾರತದ ರುವಾರಿಯಾಗಿದ್ದಾರೆ ಎಂದು ಕಾರ್ಕಳ ಕಾಂಗ್ರಸ್ ಅಧ್ಯಕ್ಷ  ನ್ಯಾಯವಾದಿ ಶೇಖರ ಮಡಿವಾಳ ಹೇಳಿದರು.


ಸ್ಥಳೀಯ  ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ  ಅವರು "ದೇವರಾಜ ಅರಸು  ಹಿಂದುಳಿದ ವರ್ಗದವರ ಬದುಕು ಬದಲಿಸಿದ  ಮಹಾನಾಯಕ. ಭೂಸುದಾರಣಾ ಮಸೂದೆಯ ಯಶಸ್ವೀ ಅನುಷ್ಟಾನ, ಹಿಂದುಳಿದ ವರ್ಗಕ್ಕೆ ಪ್ರತ್ಯೇಕ ಇಲಾಖೆಯ ಹುಟ್ಟು ಹಾಕಿ ದೇಶದ ಸಂವಿಧಾನವನ್ನು ಎತ್ತಿ ಹಿಡಿದವರು" ಎಂದು ಅವರು ಹೇಳಿದರು.

 ಕಾರ್ಯಕ್ರಮದಲ್ಲಿ  ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್,ಡಿಸಿಸಿ ಸದಸ್ಯ ಸಿರಿಯಣ್ಣ ಶೆಟ್ಟಿ, ಉಧ್ಯಮಿ ಉಪೇಂದ್ರ ನಾಯಕ್, ಕೆಪಿಸಿಸಿ ಕಿಸಾನ್ ಘಟಕ ಕಾರ್ಯದರ್ಶಿ ಉದಯ ಶೆಟ್ಟಿ,  ಆರೀಫ್ ಕಲ್ಲೊಟ್ಟೆ , ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಹಿಂದುಳಿದ ವರ್ಗದ ಅದ್ಯಕ್ಷ ಕುಶ ಮೂಲ್ಯ,  ಐಟಿ ಸತೀಶ,  ರಾಜೇಶ್ ದೇವಾಡಿಗ, ರಾಜೇಂದ್ರ ಕಾರ್ಕಳ, ಪುರಸಭಾ ಸದಸ್ಯರಾದ ಶುಭದಾರಾವ್, ಹರೀಷ್ ಕುಮಾರ್, ವಿನ್ನಿ ಬೋಲ್ಡ್, ಸೀತಾರಾಮ್, ವಿಶ್ವನಾಥ ಭಂಡಾರಿ, ಪೆಲಿಕ್ಸ್ ಡಿಸೋಜ, ಮನೋಜ್, ವಾಸು ಶೆಟ್ಟಿ, ಮಾಜಿ ಮಹಿಳಾಧ್ಯಕ್ಷೆ ಮಾಲಿನಿ ರೈ, ವಿನ್ನಿ ಡಿ'ಸೋಜ,  ಶೋಭಾ, ಸರೋಜಿನಿ, ಮಾಜಿ ಪುರಸಭಾ ಸದಸ್ಯರಾದ ನವೀನ್ ದೇವಾಡಿಗ,ಸುನೀಲ್ ಕೋಟ್ಯಾನ್, ವಿವೇಕಾನಂದ ಶೆಣೈ, ಸುನೀಲ್ ಕುಮಾರ್,, ಅಬ್ದುಲ್ ಸಾಣೂರು ಮತ್ತಿತರರು  ಉಪಸ್ಥಿತರಿದ್ದರು.

ಕಾಂಗ್ರೆಸ್   ವಕ್ತಾರ ನಕ್ರೆ ಬಿಪಿನಚಂದ್ರ ಪಾಲ್ ಪ್ರಸ್ತಾವನೆ ಗೈದು ಕಾರ್ಯಕ್ರಮದ ಔಚಿತ್ಯದ ಬಗ್ಗೆ ಮಾತಾಡಿದರು. ಪ್ರದಾನ ಕಾರ್ಯದರ್ಶಿ  ಪ್ರಭಾಕರ ಬಂಗೇರ ವಂದನಾರ್ಪಣೆ ಗೈದರು

 

ಜಾಹೀರಾತು
 


  Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget