ಕಾರ್ಕಳ ಪುರಸಭಾ ವ್ಯಾಪ್ತಿಗೆ 250 ಮನೆಗಳು ಮಂಜೂರು-Times Of Karkala
ಕಾರ್ಕಳ,ಆ 26 : ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕಾರ್ಕಳ ಪುರಸಭಾ ವ್ಯಾಪ್ತಿಗೆ 250 ಮನೆಗಳು ಮಂಜೂರಾಗಿವೆ. ಅದರಲ್ಲಿ ಶೇ50 ರಷ್ಟು ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಲಾಗಿದ್ದು, ಉಳಿದ ಶೇ 50 ರಷ್ಟು ಇತರೆ ವರ್ಗದ ನಿವಾಸಿಗಳಿಗೆ ಮೀಸಲಿರಿಸಲಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಕಾರ್ಕಳದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರೂ52 ಲಕ್ಷ ಬಿಡುಗಡೆಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಮಾಳ ಹುಕ್ರಟ್ಟೆ ಆಟೋರಿಕ್ಷಾ ನಿಲ್ದಾಣದ ಮೇಲ್ಚಾವಣಿಗೆ 2 ಲಕ್ಷ, ನಲ್ಲೂರು ಕಳತ್ರಪಾದೆ ಸ.ಹಿ.ಪ್ರಾ. ಶಾಲೆ ಕ್ರೀಡಾಂಗಣ ಅಭಿವೃದ್ಧಿಗೆ 2 ಲಕ್ಷ, ಶಿರ್ಲಾಲು ಆಂಜನೇಯ ನಗರ ಗರಡಿ ರಸ್ತೆ ಅಭಿವೃದ್ಧಿಗೆ 5 ಲಕ್ಷ, ಜೋಡುರಸ್ತೆ ಸಾಯಿ ಪಂಚಮಿ ರಸ್ತೆ ಅಭಿವೃದ್ಧಿಗೆ 5 ಲಕ್ಷ, ಎರ್ಲಪಾಡಿ ಗ್ರಾಮದ ಜಾರ್ಕಳ ಪಾದೆ ರಸ್ತೆ ಬಳಿಯಿಂದ ತಮಿಳು ಕಾಲೋನಿ ವರೆಗೆ ಕಾಂಕ್ರೀಟ್ ಕರಣಕ್ಕೆ5 ಲಕ್ಶ, ಹಿರ್ಗಾನ ಗ್ರಾಮದ ಬಿಎಂ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಗೆ 3 ಲಕ್ಷ, ಕಾರ್ಕಳ ರವಿಶಂಕರ್ ವಿದ್ಯಾಮಂದಿರ ಸಂಪರ್ಕ ರಸ್ತೆ ನಿರ್ಮಾಣಕ್ಕೆ 5 ಲಕ್ಷ, ಈದು ಗ್ರಾಮದ ಹದಿನಡ್ಕ ಬ್ರಹ್ಮಶ್ರೀ ಮುಗೇರ ದೇವಸ್ಥಾನದ ಅಭಿವೃದ್ಧಿಗೆ 1.82 ಲಕ್ಷ, ಹೆಬ್ರಿ ನಾರಾಯಣಗುರು ಪ್ರಾರ್ಥನಾ ಮಂದಿರ ಅಭಿವೃದ್ಧಿ 5 ಲಕ್ಷ, ಎಣ್ಣೆಹೊಳೆ ಜಂಗಮಮಠ ಅಭಿವೃದ್ಧಿ 5 ಲಕ್ಷ, ಪಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ನಿರ್ಮಾಣ 5 ಲಕ್ಷ ಹಾಗೂ ಕಾರ್ಕಳ ಬಾಲಾಜಿ ಪ್ರಾರ್ಥನಾ ಮಂದಿರದ ಮುಂದುವರಿದ ಅಭಿವೃದ್ಧಿ ಕಾಮಗಾರಿಗೆ ೫ ಲಕ್ಷ ಮಂಜೂರಾಗಿದೆ ಎಂದು ತಿಳಿದು ಬಂದಿದೆ .
Post a comment