ಬಿರುವೆರ್ ಕುಡ್ಲ ಬೆದ್ರ ಘಟಕದಿಂದ ಶ್ರಮದಾನ-Times Of Karkala
ಕಾರ್ಕಳ,ಆ 23 : ಬಿರುವೆರ್ ಕುಡ್ಲ ಬೆದ್ರ ಘಟಕದ ಸದಸ್ಯರು ಭಾನುವಾರ ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ಶಾಲಾ ಕೊಠಡಿಗಳಿಗೆ ಹಾಗೂ ಸಭಾಂಗಣಕ್ಕೆ ಬಣ್ಣ ಬಳಿಯುವ ಕೆಲಸವನ್ನು ಶ್ರಮದಾನದ ಮೂಲಕ ನೆರವೇರಿಸಿದರು.
ಈ ಸಂದರ್ಭದಲ್ಲಿ ಬೆದ್ರ ಘಟಕದ ಅಧ್ಯಕ್ಷರು ಶ್ರೀ ರಾಜ್ ಪವಿ ಬಿಲ್ಲವ ಹಾಗೂಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೆ ವೇಳೆ ತಂಡದ ಸದಸ್ಯರಾದ ದೀಕ್ಷಿತ್ ಅವರ ಹುಟ್ಟು ಹಬ್ಬಕ್ಕೆ ಶುಭ ಹಾರೈಸಲಾಯಿತು.
Post a comment