ಕಾರ್ಕಳ:ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಅಸಹಾಯಕ ಸ್ಥಿತಿಯಲ್ಲಿರುವ ಇವರಿಗೆ ನೆರವಾಗುವಿರಾ?

ಕಾರ್ಕಳ:ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಅಸಹಾಯಕ ಸ್ಥಿತಿಯಲ್ಲಿರುವ ಇವರಿಗೆ ನೆರವಾಗುವಿರಾ?


ಕಾರ್ಕಳ,ಆ.12:ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಈ ಮಹಾಮಾರಿ ಕೊರೋನಾ ಈಗಾಗಲೇ ಸ್ಥಿತಿವಂತರ ಜಂಘಾಬಲವನ್ನೇ ಉಡುಗಿಸಿ ಜನಸಾಮಾನ್ಯರ ಪಾಡಂತೂ ದೇವರೂ ಕೇಳದಂತಹಾ ಈ ಕೆಟ್ಟ ದಿನಗಳಲ್ಲಿ ಸಣ್ಣ ಅನಾರೋಗ್ಯ ಕಾಡಿದರೂ ಕೇಳುವವರಿಲ್ಲ.ಕೊರೋನಾ ನಿಯಮಗಳ ಹೆಸರಲ್ಲಿ ,ಇನ್ನಿಲ್ಲದಷ್ಟು ಕಾಟ ನೀಡುವ ನಮ್ಮ ವ್ಯವಸ್ಥೆಯ ನಡುವೆ ದೊಡ್ಡ ಆರೋಗ್ಯ ಸಮಸದಯೆ ಬಂದರೆ ಹೇಗಾದೀತು ಯೋಚೊಸಿ.

ಹೌದು ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಪ್ರವೀಣ್ ಕುಲಾಲ್ ಇವರು ತಾನು ಬಾರ್ ಮ್ಯಾನೇಜರ್ ವೃತ್ತಿ ನಿರ್ವಹಿಸುತ್ತಿದ್ದು ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿ ತನ್ನ ಮಡದಿ ಹಾಗೂ ಪ್ರಾಯದ ತನ್ನ ತಾಯಿಯ ಜತೆ ಬದುಕು ಸಾಗಿಸುತ್ತಿದ್ದರು.

ಇದ್ದಕಿದ್ದಂತೆ ತೀವ್ರ ತರದ ಜ್ವರ ಕಾಣಿಸಿಕೊಂಡಿದ್ದು ಕಿನ್ನಿಗೋಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ನಂತರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.ಜಾಂಡೀಸ್ ನ ಲಕ್ಷಣಗಳು ಕಂಡಿದ್ದು ಈಗ ಮೂತ್ರಕೋಶ ಹಾಗೂ ಪಿತ್ತ ಕೋಶದ ಸಮಸ್ಯೆ ಕಾಡುತ್ತಿರುವುದಾಗಿ ವೈದ್ಯರು ಧೃಡಪಡಿಸಿದ್ದಾರೆ.

ಇದೀಗ ವಾರ ಒಂದು ಕಳೆದರೂ ಆರೋಗ್ಯದಲ್ಲಿ ಚೇತರಿಕೆ‌ ಕಾಣದೆ ತೀವೃನಿಗಾ ಘಟಕದಲ್ಲಿ‌ಮಲಗಿದ್ದಾರೆ.ದಿನಕ್ಕೆ ₹20000 ಖರ್ಚಾಗುತ್ತಿದ್ದು ಕುಟುಂಬಕ್ಕೆ ಬೇರೆ ಆದಾಯವಿಲ್ಲದೆ ಪತ್ನಿಯ ಚಿನ್ನಾಭರಣಗಳನ್ನು ಅಡವಿಟ್ಟು ಬಿಲ್ಲು ಪಾವತಿಸುವ ಸ್ಥಿತಿ ತಲುಪಿದ್ದಾರೆ.ಇತ್ತ ICU ಒಳಗೆ ಅವರನ್ನು ಕಾಣಲೂ ಆಗದೆ ,ಅತ್ತ ದಿನದಿಂದ ದಿನಕ್ಕೆ ಹಣ ಪಾವತಿಸಿದರೂ ಪ್ರವೀಣ್ ಕುಲಾಲರು ಮಾತನಾಡಲೂ ಆಗದೆ ತನ್ನವರ ಗುರುತುಹಚ್ವಲೂ ಅಶಕ್ತರಾಗಿದ್ದಾರೆ.

ಸಂಕಷ್ಟದಲ್ಲುರುವ ಈ‌ಕುಟುಂಬಕ್ಕೆ ದಾನಿಗಳ‌ ಸಹಾಯದ ಅಗತ್ಯವಿದೆ.ತೀರಾ ಸಂಕಷ್ಟದಲ್ಲಿರುವ ಇವರಿಗೆ ಸಹಾಯ ಮಾಡಿ ಒಂದಿಷ್ಟು ದೈರ್ಯ ತುಂಬೋಣ.

ಸಹಾಯ ಮಾಡಲಿಚ್ಛಿಸುವ ದಾನಿಗಳು‌ ಈ‌ಕೆಳಗಿನ‌ ಬ್ಯಾಂಕ್ ಖಾತೆಗೆ ಜಮ ಮಾಡಬಹುದು.

Name= Mrs mohini 

Branch=moodumarnadu

  Account no= 520101267800222

IFSC CODE=CORP0001601ಜಾಹೀರಾತು   

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget