"ಗಣೇಶೋತ್ಸವಕ್ಕೆ ಮಾತ್ರ ನಿರ್ಬಂಧ ಸರಿಯಲ್ಲ,ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರ ಹಿಂದೂಗಳ ಭಾವನೆಗೆ ಬೆಲೆಕೊಡಬೇಕು"-ಶಿವಸೇನಾ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಮಧುಕರ ಮುದ್ರಾಡಿ- Timesofkarkala.in


"ಗಣೇಶೋತ್ಸವಕ್ಕೆ ಮಾತ್ರ ನಿರ್ಬಂಧ ಸರಿಯಲ್ಲ,ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರ ಹಿಂದೂಗಳ ಭಾವನೆಗೆ ಬೆಲೆಕೊಡಬೇಕು"-ಶಿವಸೇನಾ ಕರ್ನಾಟಕ ಪ್ರಧಾನ  ಕಾರ್ಯದರ್ಶಿ ಮಧುಕರ ಮುದ್ರಾಡಿ 

ಕಾರ್ಕಳ,ಆ.16: ಸರಕಾರ ಗಣೇಶೋತ್ಸವಕ್ಕೆ ಮಾತ್ರ ನಿರ್ಬಂಧ ಹೇರಿರುವುದು ಸರಿಯಲ್ಲ,ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರ ಹಿಂದೂಗಳ ಭಾವನೆಗೆ ಬೆಲೆಕೊಡಬೇಕು ಎಂದು  ಶಿವಸೇನಾ ಕರ್ನಾಟಕ ಪ್ರಧಾನ  ಕಾರ್ಯದರ್ಶಿ ಮಧುಕರ ಮುದ್ರಾಡಿ  ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಕೋವಿಡ್-೧೯ ಕಾರಣಕ್ಕಾಗಿ  ಉಡುಪಿ ಜಿಲ್ಲಾಧಿಕಾರಿಗಳು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರಿದ್ದು, ಇದು ಹಿಂದುಗಳ ಭಾವನೆಗಳಿಗೆ ನೋವುಂಟುಮಾಡಿದೆ. ರಾಜ್ಯದಲ್ಲಿ ಇಷ್ಟೆಲ್ಲಾ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತಿದ್ದರೂ ಗೆಣೇಶೋತ್ಸವಕ್ಕೆ ಮಾತ್ರ ನಿರ್ಬಂಧ ಸರಿಯಲ್ಲ.

ಹಿಂದುತ್ವದ , ಶ್ರೀ ರಾಮನ ಹೆಸರಿನಲ್ಲಿ ಅಧಿಕಾರದಲ್ಲಿರುವ ಸರಕಾರ ಇಂತಹ ನಿರ್ಧಾರ ಗಳಿಂದ ದೂರ ಸರಿದು ಹಿಂದೂಗಳ ಐಕ್ಯತೆ , ಒಗ್ಗಟ್ಟು , ಭಾವನೆಗಳಿಗೆ ಬೆಲೆಕೊಟ್ಟು ಕೂಡಲೇ ಸಾರ್ವಜನಿಕವಾಗಿ ಸರಳ ವಾಗಿ ಧಾರ್ಮಿಕ ವಿಧಿವಿಧಾನ , ವಿಸರ್ಜನೆಗಳಿಗೆ ಯಾವುದೇ ತೊಂದರೆ ಉಂಟಾಗದೆ ಆಚರಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಜಾಹೀರಾತು 


  


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget