"ಕಾಂಗ್ರೆಸ್ ಸರ್ವನಾಶಕ್ಕೆ ನಿಮ್ಮಂತಹ ನಾಯಕರುಗಳ ದುರಾಸೆಯೇ ಕಾರಣ" ವೀರಪ್ಪ ಮೊಯ್ಲಿ ವಿರುದ್ಧ ಆಕ್ರೋಶ ಹೊರ ಹಾಕಿದ ಮಾಜಿ ಕಾರ್ಕಳ ತಾಲೂಕು ಪಂಚಾಯತ್ ಸದಸ್ಸ ಕ್ಸೇವಿಯರ್
"ಕಾಂಗ್ರೆಸ್ ಸರ್ವನಾಶಕ್ಕೆ ನಿಮ್ಮಂತಹ ನಾಯಕರುಗಳ ದುರಾಸೆಯೇ ಕಾರಣ"
ಬೆಳ್ಮಣ್,ಆ.28: ಕಾಂಗ್ರೆಸ್ ರಾಷ್ಟ್ರ ರಾಜಕೀಯಕ್ಕೆ ನಾಯಕತ್ವ ಬದಲಾಗಬೇಕೆಂದು ಸೋನಿಯ ಗಾಂಧಿಯವರ ನಾಯಕತ್ವ ಬದಲಾವಣೆ ಬಗ್ಗೆ ಪತ್ರ ಬರೆದ ಮಾಜಿ ಸಚಿವ ವೀರಪ್ಪ ಮೊಯ್ಲಿಯವರನ್ನು ಈ ಕೂಡಲೇ ಪಕ್ಷದಿಂದ ಅಮಾನತುಗೊಳಿಸಬೇಕು. ಸ್ವಕ್ಷೇತ್ರ ಕಾರ್ಕಳದಲ್ಲಿ ಅನೇಕ ಬಾರಿ ಗೆದ್ದು ಕಾಂಗ್ರೆಸ್ ಪಕ್ಷದಿಂದ ಎಲ್ಲವನ್ನೂ ಅನುಭವಿಸಿ, ಪಕ್ಷದ ನಾಯಕತ್ವಕ್ಕೆ ಸವಾಲು ಒಡ್ಡುವ ವೀರಪ್ಪ ಮೊಯ್ಲಿ ಕಾರ್ಕಳ ನಾಯಕತ್ವದ ಬಗ್ಗೆ ಮೊದಲು ಚಿಂತನೆ ಮಾಡಲಿ ಎಂದು ಬೆಳ್ಮಣ್ ಕಾಂಗ್ರಸ್ ಮುಖಂಡ ಮಾಜಿ ಕಾರ್ಕಳ ತಾಲೂಕು ಪಂಚಾಯತ್ ಸದಸ್ಸ ಕ್ಸೇವಿಯರ್ ಡಿಮೆಲ್ಲೊ ಗುಡುಗಿದ್ದಾರೆ.
ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸರ್ವನಾಶಕ್ಕೆ ನಿಮ್ಮಂತಹ ನಾಯಕರುಗಳ ದುರಾಸೆಯೇ ಕಾರಣ. ಪಕ್ಷದಲ್ಲಿ ಯುವಶಕ್ತಿಗೆ ಅವಕಾಶ ನೀಡಿ ಪಕ್ಷ ಬಲವರ್ದನೆಗೆ ಸಹಕರಿಸಿ ಎಂದು ಸಲಹೆ ನೀಡಿದಲ್ಲದೇ, ಈ ಬಗ್ಗೆ ಹೈಕಮಾಂಡ್ಗೆ ಶೀಘ್ರದಲ್ಲಿಯೇ ವರದಿಯನ್ನೂ ಕೂಡ ಸಲ್ಲಿಸಲಾಗುವುದೆಂದು ತಿಳಿಸಿದ್ದಾರೆ.
Post a comment