ಹೆಬ್ರಿ:"ಬಿಜೆಪಿಗೆ ಚುನಾವಣೆ ಸಂಧರ್ಭದಲ್ಲಿ ಮಾತ್ರ ನೆನಪಾಗುವ ವಿಶ್ವಕರ್ಮ ಸಮಾಜ,ಕೆಲಸ ಕಳೆಕೊಂಡವವರಿಗೆ ರಾಜ್ಯ ಸರ್ಕಾರದಿಂದ ಕನಿಷ್ಠ ಪ್ಯಾಕೇಜ್ ಕೂಡಾ ಇಲ್ಲ"-ವಿಶ್ವಕರ್ಮ ಮಹಾಸಭಾದ ಮಾಧ್ಯಮ ವಕ್ತಾರ ಮಾರುತಿ ಬಡಿಗೇರ್ ಆಕ್ರೋಶ

ಹೆಬ್ರಿ:"ಬಿಜೆಪಿಗೆ ಚುನಾವಣೆ ಸಂಧರ್ಭದಲ್ಲಿ ಮಾತ್ರ ನೆನಪಾಗುವ ವಿಶ್ವಕರ್ಮ ಸಮಾಜ,ಕೆಲಸ ಕಳೆಕೊಂಡವವರಿಗೆ ರಾಜ್ಯ ಸರ್ಕಾರದಿಂದ ಕನಿಷ್ಠ ಪ್ಯಾಕೇಜ್ ಕೂಡಾ ಇಲ್ಲ"-ವಿಶ್ವಕರ್ಮ ಮಹಾಸಭಾದ ಮಾಧ್ಯಮ ವಕ್ತಾರ ಮಾರುತಿ  ಬಡಿಗೇರ್ ಆಕ್ರೋಶ-Times of karkala  


ಹೆಬ್ರಿ,ಆ.17:"ವಿಶ್ವಕರ್ಮ ಸಮಾಜದವರಿಗೆ ಸರ್ಕಾರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ. ಕಳೆದ 5 ತಿಂಗಳಿಂದ ರಾಜ್ಯದಲ್ಲಿ ವಿಶ್ವಕರ್ಮರು ಕೆಲಸವಿಲ್ಲದೆ  ಸಂಕಷ್ಟಕ್ಕೊಳಗಾಗಿದ್ದು, ಆದರೆ ರಾಜ್ಯ ಸರ್ಕಾರ ಲಾಕ್ ಡೌನ್  ಸಂದರ್ಭದಲ್ಲಿ ವಿಶ್ವಕರ್ಮರಿಗೆ ಪರಿಹಾರದ ಪ್ಯಾಕೇಜ್ ಕೂಡಾ  ಕೊಡಲಿಲ್ಲ. ಸವಿತಾ ಸಮಾಜ ಮಡಿವಾಳ ಸಮಾಜ ಮತ್ತು ಹೂಗಾರ್ ಸಮಾಜಕ್ಕೆ ಹಾಗೂ ನೇಕಾರರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ವಿಶ್ವಕರ್ಮ ಸಮಾಜಕ್ಕೆ ನಯಾಪೈಸೆ ನೀಡದೇ ಅನ್ಯಾಯ ಮಾಡಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಮಾಧ್ಯಮ ವಕ್ತಾರ ರಾಯಚೂರಿನ ಮಾರುತಿ ಬಡಿಗೇರ್  ಆಕ್ರೋಶ  ವ್ಯಕ್ತಪಡಿಸಿದರು.


ಹೆಬ್ರಿ ರಾಗಿಹಕ್ಲು ರಮೇಶ್ ಆಚಾರ್ಯರ ನೇತ್ರತ್ವದಲ್ಲಿ ನಡೆದ ಅಖಿಲ ಕರ್ನಾಟಕ  ವಿಶ್ವಕರ್ಮ ಮಹಾಸಭಾದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು "ಬಿಜೆಪಿ ಪಕ್ಷಕ್ಕೆ ಚುನಾವಣೆ ಸಂದರ್ಭದಲ್ಲಿ ಮಾತ್ರ ವಿಶ್ವಕರ್ಮ ಸಮಾಜದ ನೆನಪಾಗುತ್ತೆ ಕಳೆದ ಒಂದು ವರ್ಷದಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ನೇಮಕ ಮಾಡದೆ ರಾಜ್ಯ ಸರ್ಕಾರ ನಿರ್ಲಕ್ಷತನ ತೋರುತ್ತಿದೆ.  ಆರ್ಯವೈಶ್ಯ ನಿಗಮ, ಬ್ರಾಹ್ಮಣ ಅಭಿವೃದ್ಧಿ ನಿಗಮ ಸಹಿತ ಇನ್ನಿತರ ನಿಗಮಗಳಿಗೆ ಅಧ್ಯಕ್ಷರನ್ನು ಮಾಡಿದ್ದು ನಮಗೆ ಏಕೆ ಮಾಡಲಿಲ್ಲ? 45 ಲಕ್ಷ ಜನ  ವಿಶ್ವಕರ್ಮರಿದ್ದು ಶೇಕಡ 90ರಷ್ಟು ಮತ ಹಾಕಿದ್ದಾರೆ ಆದರೆ ಬಿಜೆಪಿ ಪಕ್ಷವು ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಸರ್ಕಾರದ ಈ ದೋರಣೆ ಹೀಗೆ ಮುಂದುವರೆದರೆ ನಮ್ಮ ವಿಶ್ವಕರ್ಮ ಸಮಾಜದವರು ಮುಂದಿನ ದಿನಗಳಲ್ಲಿ ಬಿಜೆಪಿಗೆ  ತಕ್ಕಪಾಠ  ಕಲಿಸುತ್ತೇವೆ" ಎಂದು ಸರಕಾರಕ್ಕೆ  ಎಚ್ಚರಿಕೆ  ನೀಡಿದರು.

ಈ ಸಂಧರ್ಭ  ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಹೆಬ್ರಿ ಗ್ರಾಮ‌ಮೋಕ್ತೇಸರ ಬಿ.ಎಂ.ಶೇಖರ ಆಚಾರ್ಯ ಮಾತನಾಡಿ ಎಲ್ಲರೂ ಒಂದಾಗಿ ಹೆಬ್ರಿಯಲ್ಲಿ ವಿಶ್ವಕರ್ಮ ಸಮುದಾಯವನ್ನು ಬಲಿಷ್ಠವಾಗಿ ಕಟ್ಟಬೇಕಿದೆ ಎಂದರು. ಹೆಬ್ರಿ ತಾಲ್ಲೂಕು  ವಿಶ್ವಕರ್ಮ ಮಹಾಸಭಾದ ಸಂಘಟನೆಯ ರೂವಾರಿ ಸಮಾಜದ ಮುಖಂಡ ಎಚ್. ರಮೇಶ್ ಆಚಾರ್ಯ ಮಾತನಾಡಿ ಹೆಬ್ರಿ ತಾಲ್ಲೂಕಿನಲ್ಲಿ ಮಹಾಸಭಾವನ್ನು ಸಂಘಟಿಸಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ರಮೇಶ್ ಆಚಾರ್ಯ ಅವರನ್ನು ಮಹಾಸಭಾದ ವತಿಯಿಂದ ಗೌರವಿಸಲಾಯಿತು.ಪಿಯುಸಿಯಲ್ಲಿ ಸಾಧನೆ ಮಾಡಿದ ವಿಧ್ಯಾರ್ಥಿ ಅಭಿಷೇಕ್ ಆರ್. ಆಚಾರ್ಯ, ರಾಯಚೂರಿನ ಮಾರುತಿ ಬಡಿಗೇರ್, ಗುರು ವಿಶ್ವಕರ್ಮ, ಗಾಯಕಿ ದೀಪಿಕಾ ಆಚಾರ್ಯ ಪರ್ಕಳ ಅವರನ್ನು ಗೌರವಿಸಲಾಯಿತು. ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪುರ ರತ್ನಾಕರ ಆಚಾರ್ಯ, ಸಮಾಜದ ಹಿರಿಯರು,ಯುವಕರು ಭಾಗವಹಿಸಿದ್ದರು.

ಹೆಬ್ರಿಯ ರಾಗಿಹಕ್ಲುವಿನಲ್ಲಿ ಭಾನುವಾರ ನಡೆದ ಕೆ.ಪಿ.ನಂಜುಂಡಿ ನೇತ್ರತ್ವದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಹೆಬ್ರಿ ತಾಲ್ಲೂಕು ಘಟಕದ ಸಂಘಟನಾ ಸಭೆಯಲ್ಲಿ ವಿಶ್ವಕರ್ಮ ಸಮಾಜದ ಮುಖಂಡ ರಮೇಶ್ ಆಚಾರ್ಯ ಅವರನ್ನು ಗೌರವಿಸಲಾಯಿತು.

ಹೆಬ್ರಿ ರಾಗಿಹಕ್ಲು ಅನುಷ್ ಆಚಾರ್ಯ ಸ್ವಾಗತಿಸಿ ಪತ್ರಕರ್ತ ಸುಕುಮಾರ್ ಮುನಿಯಾಲ್ ನಿರೂಪಿಸಿ ವಂದಿಸಿದರು.


ಜಾಹೀರಾತು 


  

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget