ಅಂಡಾರು:ಸೇತುವೆ ಬಳಿ ಶವ ಪತ್ತೆ-Times Of Karkala
ಕಾರ್ಕಳ,ಆ,30: ಕಾರ್ಕಳ ತಾಲೂಕಿನ ಅಂಡಾರು ಬಳಿಯ ಪೈತಾಳ ನಿವಾಸಿ ಅವಿವಾಹಿತ ಪ್ರಶಾಂತ ಎಂ.ಕೆ.(26) ಅವರ ಮೃತದೇಹ ಶನಿವಾರ ಇಲ್ಲಿನ ಹೆಗ್ಡೆಬೆಟ್ಟು ಸೇತುವೆ ಬಳಿ ಪತ್ತೆಯಾಗಿದೆ.
ಶವ ಪತ್ತೆಯಾದ ಹಿಂದಿನ ದಿನ ಆತ ಸಂಜೆ ವೇಳೆ ಮನೆಯಿಂದ ಹೊರಗೆ ಹೋಗಿದ್ದು, ಕತ್ತಲಾದರೂ ಮನೆಗೆ ಹಿಂದಿರುಗಿರಲಿಲ್ಲ. ಮೃತರ ಸಂಬಂಧಿ ಅಜೆಕಾರು ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಮಣಿಪಾಲ ಆಸ್ಪತ್ರೆಗೆ ಒಯ್ಯಲಾಗಿದೆ.
Post a comment