ಕಾರ್ಕಳ:ಕೋವಿಡ್ ವಾರಿಯರ್ಸ್ ಗೆ ಸನ್ಮಾನ-Times Of Karkala
ಕಾರ್ಕಳ,ಆ 30: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಎಲ್ಲಾ 116 ಸಿಬ್ಬಂದಿಗಳನ್ನು, ಹಾಗೂ 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಲಿರುವ ವೈದ್ಯಧಿಕಾರಿ ಡಾ. ಪಿ. ಕೇಶವ ಮಲ್ಯ ಇವರನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್ ಸ್ಟಾಂಡ್ (ರಿ) ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಭರತೇಶ್, "ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸರ್ವ ಸಿಬ್ಬಂದಿಗಳ ಸೇವೆ ಅನನ್ಯ. ತಮ್ಮ ಕುಟುಂಬದವರಿಂದ ದೂರವಿದ್ದು ಕರ್ತವ್ಯವೇ ಮುಖ್ಯ ಎಂದು ಸೇವೆ ಸಲ್ಲಿಸಿದ ಅವರು ನಿಜವಾಗಿಯೂ ವಾರಿರ್ಯಸ್ ಗಳೇ. ಅವರೆಲ್ಲರೂ ಅಭಿನಂದನೆಗೆ ಅರ್ಹರು. ಅವರ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿಯಾಗಲಿ" ಎಂದರು. ಈ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷರಾದ ಜಗದೀಶ್ ಮಲ್ಯ, ಅಧ್ಯಕ್ಷರಾದ ಸುರೇಶ್ ದೇವಾಡಿಗ, ಉಪಸ್ಥಿತಿತರಿದ್ದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಸ್ ಸ್ಟಾಂಡ್ ಕಾರ್ಕಳ ಇದರ ಸ್ಥಾಪಕಾಧ್ಯಕ್ಷ, ಪುರಸಭಾ ಸದಸ್ಯ ಶುಭದ್ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು, ಸಮಿತಿಯ ಪದಾದಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
Post a comment