ಬಜಗೋಳಿ:ಶ್ವಾನಗಳಿಗೆ ಯಶಸ್ವಿ ಸಂತಾನಹರಣ ಚಿಕಿತ್ಸೆ-Times of karkala

 ಬಜಗೋಳಿ:ಶ್ವಾನಗಳಿಗೆ ಯಶಸ್ವಿ ಸಂತಾನಹರಣ ಚಿಕಿತ್ಸೆ-Times of karkala  

 

ಬಜಗೋಳಿ,ಆ.18: ಸ್ವಾತಂತ್ರ್ಯೋತ್ಸವದ ಸಲುವಾಗಿ ಅಹಿಂಸಾ ಪೆಟ್ ಕೇರ್ ಕ್ಲಬ್ ಬಜಗೋಳಿ,ರೋಟರಿ ಆನ್ಸ್ ಕ್ಲಬ್ ಕಾರ್ಕಳ ಮತ್ತು ಜೈನ ಧರ್ಮ ಶಾಲೆ ಟ್ರಸ್ಟ್ ಬಜಗೋಳಿ ಇವರ ಆಶ್ರಯದಲ್ಲಿ ಬೀದಿ ನಾಯಿಗಳಿಗೆ ಹಾಗೂ ಸಾಕು ನಾಯಿಗಳಿಗೆ ಕಾರ್ಕಳ ಪಶು ಸಂಗೋಪನಾ ಸಹಾಯಕ ನಿರ್ದೇಶಕರಾದ ಡಾ.ಸುಬ್ರಹ್ಮಣ್ಯ ಪ್ರಸಾದ್ ಇವರ ಮಾರ್ಗದರ್ಶನದಲ್ಲಿ  ಪಶುಸಂಗೋಪನ ಇಲಾಖೆಯ ಖ್ಯಾತ ವೈದ್ಯರುಗಳಾದ ಡಾ.ವಾಸುದೇವ ಪೈ ನಿಟ್ಟೆ, ಡಾ.ವಾಗೀಶ ಚವ್ಹಾಣ ಹೆಮ್ಮಾಡಿ, ಡಾ.ಪ್ರದೀಪ್ ಕುಮಾರ್ ಕೊಂಡೋಜಿ ಸ್ಯಾಬರಕಟ್ಟೆ, ಡಾ.ಯಶಸ್ವಿ ನಾರಾವಿ ಮಂಗಳೂರು, ಡಾ.ಮಲ್ಲಿಕಾರ್ಜುನ ಶಿರ್ತಾಡಿ, ಡಾ.ಅರುಣ್ ಕುಮಾರ್ ಬೈಲೂರು, ಡಾ.ಶ್ರೀಮತಿ ಶೋಭಾ ನಿಟ್ಟೆ ಯಶಸ್ವಿಯಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಅಹಿಂಸಾ ಪೆಟ್ ಕೇರ್ ಕ್ಲಬ್ ನ ಸಿಬ್ಬಂದಿವರ್ಗ ಹಾಗೂ ಸದಸ್ಯರು ಕಾರ್ಯಕ್ರಮಕ್ಕೆ ಸಹಕರಿಸಿದರು. ರೋಟರಿ ಆನ್ಸ್ ಕ್ಲಬ್ ನ ಅಧ್ಯಕ್ಷರಾದ ರಮಿತಾ ಶ್ಯೆಲೇಂದ್ರ,ಮಹಾವೀರ ಹೆಗ್ಡೆ ಪವರ್‌ಪಾಯಿಂಟ್,ತಾಲ್ಲೂಕು ಪಂಚಾಯಿತಿ ಸದಸ್ಯ ಸುಧಾಕರ್ ಶೆಟ್ಟಿ,ಶೈಲೇಶ್ ವರ್ಮ ಮುಡುಕೋಡಿ, ಪ್ರುತ್ವಿರಾಜ್ ಹೆಗ್ಡೆ ಅಪ್ಪಾಯಿ, ಮುಡಾರು ಗ್ರಾಮ ಪಂಚಾಯಿತಿ ಸದಸ್ಯ ಶಂಕರ ಶೆಟ್ಟಿ,ಕೃಷ್ಣ ಕುಮಾರ್ ಕುಡಬೆಟ್ಟು, ರತ್ನಾಕರ ಪೂಜಾರಿ ಪ್ರಕೃತಿ, ಶ್ರೀಮತಿ ಲಲಿತಮ್ಮ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಅಕ್ಷಯ ಜ್ಯೂಸ್  ಸೆಂಟರ್ ನ ಮಾಲೀಕರಾದ ಉಮೇಶ್ ರಾವ್ ಇವರು ವೈದ್ಯಾಧಿಕಾರಿಗಳಿಗೆ   ಸ್ಮರಣೆಕೆ ನೀಡಿ ಗೌರವಿಸಿದರು. ಪೆಟ್ ಕೇರ್ ಕ್ಲಬ್ ಸಂಚಾಲಕರಾದ ವೀರು ಜೈನ್ ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲಾ ವೈದ್ಯರುಗಳಿಗೆ ಹಾಗೂ ಅವರ ಸಿಬ್ಬಂದಿವರ್ಗದವರಿಗೆ ಕ್ರತಜ್ಞತಾಪೂರ್ವಕ ಧನ್ಯವಾದ ಸಮರ್ಪಿಸಿದರು.  

ಜಾಹೀರಾತು 


  
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget