ಕಾರ್ಕಳ:ಕಾರ್ಕಳ ಗ್ರಾಮಾಂತರ ಠಾಣೆಯ ಎಸೈ ಎದುರೇ ಬಜರಂಗದಳ ಕಾರ್ಯಕರ್ತರಿಂದ ದಲಿತ ವ್ಯಕ್ತಿಯ ಅರೆನಗ್ನಗೊಳಿಸಿ ಹಲ್ಲೆ:ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ದೂರು
ಕಾರ್ಕಳ,ಆ.08:ಕಾರ್ಕಳ ಗ್ರಾಮಾಂತರ ಠಾಣೆಯ ಎಸೈ ಎದುರೇ ಬಜರಂಗದಳ ಕಾರ್ಯಕರ್ತರು ದಲಿತ ವ್ಯಕ್ತಿಯ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ...

ಘಟನೆಯ ವಿವರ: ಸೀತಾರಾಮ ಮಲೆಕುಡಿಯ ಎಂಬುವವರು ಮನೆಯಲ್ಲಿ ಹಸು ಕುರಿಗಳನ್ನು ಸಾಕಿಕೊಂಡಿದ್ದರು. ಅಲ್ಲದೆ ಪಕ್ಕದ ಮನೆಯ ಬಾಬು ಪೂಜಾರಿ ಎಂಬುವವರಿಂದ ಜು.22ರಂದು ಹಸುವೊಂದನ್ನು ಖರೀದಿಸಿದ್ದರು. ಅದೇ ದಿನ ಸಂಜೆ ಅಬ್ದುಲ್ ರೆಹಮಾನ್ ಎಂಬುವವರು ಹಬ್ಬದ ಪ್ರಯುಕ್ತ ಮನೆಗೆ ಕುರಿಗಳನ್ನು ಖರೀದಿಸಲು ಬಂದಿದ್ದರು.
ವಿಷಯ ತಿಳಿದ ಭಜರಂಗದಳ ಕಾರ್ಯಕರ್ತರು ಕಾರ್ಕಳ ಗ್ರಾಮಾಂತರ ಠಾಣೆಯ ಎಸೈ ಜತೆ ಮನೆಗೆ ಬಂದು ಅವರ ಓಮ್ನಿಯನ್ನು ಪುಡಿಗೈದಿದ್ದಾರೆ. ಅಲ್ಲದೆ ಸೀತಾರಾಮ ಮಲೆಕುಡಿಯ ರವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ತಪ್ಪಿತಸ್ಥ ಪೊಲೀಸ್ ಅಧಿಕಾರಿ ಹಾಗೂ ಹಲ್ಲೆ ನಡೆಸಿದ ಬಜರಂಗದಳ ಕಾರ್ಯಕರ್ತರ ಮೇಲೆ ಮೇಲೆ ಕ್ರಮ ಕೈಗೊಳ್ಳುವಂತೆ ಆದಿವಾಸಿ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ದೂರು ದಾಖಲಿಸಿದೆ. ಈ ಸಂಧರ್ಭದಲ್ಲಿ ಶೇಖರ್ ಲಾಯಿಲ, ರಾಜ್ಯ ಸಮಿತಿ ಸದಸ್ಯರು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಯಾನಂದ ಪಿಲಿಕಲ, ರಾಜ್ಯ ಸಮಿತಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
Post a comment