ಶಿರ್ವ:ಮಗನಿಗೆ ಸೋಂಕು:ತಂದೆ ಆತ್ಮಹತ್ಯೆ-Times Of Karkala

 ಮಗನಿಗೆ ಸೋಂಕು: ತಂದೆ ಆತ್ಮಹತ್ಯೆ-Times Of Karkala

ಉಡುಪಿ,ಆ 28:ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಪುತ್ರನಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮನನೊಂದು  ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿರ್ವದ ಕಳತ್ತೂರು ಗ್ರಾಮದ ಜ್ಯೋತಿ ನಗರ ಎಂಬಲ್ಲಿ  ನಡೆದಿದೆ. 


ರಕ್ತದೊತ್ತಡ ಹಾಗು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಸುಂದರ ಮೂಲ್ಯ(೬೦) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. 

ಕಳೆದ ಕೆಲ ದಿನಗಳಿಂದ ಮೃತರ ಪುತ್ರ ಮಣಿಪಾಲದ ಕೆಎಂಸಿ ಆಸ್ಪತ್ರೆಯ್ಲಲಿ ಚಿಕಿತ್ಸೆ ಪಡೆಯುತ್ತಿದ್ದು, ಇತ್ತೀಚೆಗಷ್ಟೇ ಕೊರೋನಾ ಸೋಂಕು ದೃಢಪಟ್ಟಿತ್ತು. ಇದರಿಂದ ಖಿನ್ನತೆಗೊಳಗಾದ ತಂದೆ, ರಾತ್ರಿ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಉಡುಪಿ ಸಿಟಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ವರದಿಯಾಗಿದೆ.

ಜಾಹೀರಾತು


































Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget