ಜಿಮೇಲ್‌ ಸೇವೆ ಡೌನ್‌:ಬಳಕೆದಾರರಿಗೆ ಸಮಸ್ಯೆ-Times of Karkala

ಜಿಮೇಲ್‌ ಸೇವೆ ಡೌನ್‌:ಬಳಕೆದಾರರಿಗೆ ಸಮಸ್ಯೆ-Times of Karkala

ಭಾರತ ಸೇರಿದಂತೆ  ಅಮೆರಿಕ, ಆಸ್ಟ್ರೇಲಿಯ, ಜಪಾನ್‌ ಮುಂತಾದ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ  ಬಳಕೆದಾರರಿಗೆ ಸಮಸ್ಯೆಯಾಗುತ್ತಿದ್ದು  ಇಂದು ಬೆಳಗ್ಗೆಯಿಂದಲೇ ಸರ್ವರ್ ಕ್ಷೀಣಿಸಿದೆ. ಯಾವುದೇ ಇಮೇಲ್‌ ಮತ್ತು ಅಟ್ಯಾಚ್‌ ಫೈಲ್‌ಗಳನ್ನು ಸೆಂಡ್‌ ಮಾಡಲಾಗದೆ ಬಳಕೆದಾರರು ಪರಿತಪಿಸುತ್ತಿದ್ದಾರೆ .

ಗೂಗಲ್‌ ಡ್ರೈವ್‌ನಲ್ಲೂ ಫೈಲ್‌ಗಳ ಅಪ್ಲೋಡ್‌, ಡೌನ್‌ಲೋಡ್‌ ಮತ್ತು ಶೇರ್‌ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗೂಗಲ್‌ ಪ್ರತಿಕ್ರಿಯಿಸಿ, ಸಮಸ್ಯೆ ಅರಿವಿಗೆ ಬಂದಿದೆ. ಶೀಘ್ರವೇ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದೆ

ಈ ರೀತಿ ಎರಡನೇ ಬಾರಿ ಜಿಮೇಲ್‌ನಲ್ಲಿ ಸಮಸ್ಯೆ ಕಾಣಿಸಿದೆ. ಜುಲೈನಲ್ಲಿ ಮೇಲ್‌ ಲಾಗಿನ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ಸಮಸ್ಯೆಯನ್ನು ಬಗೆ ಹರಿಸಿತ್ತು. ಆದರೆ ಯಾಕೆ ಈ ಸಮಸ್ಯೆ ಸೃಷ್ಟಿಯಾಯಿತು ಎಂಬುದಕ್ಕೆ ಗೂಗಲ್‌ ಯಾವುದೇ ವಿವರಣೆ ನೀಡಿರಲಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿಪ್ರಾಯಗಳನ್ನು ಬರೆದು ಹಾಕುತ್ತಿದ್ದು, ವಿಶ್ವದಲ್ಲೇ ಜಿಮೇಲ್‌ ಟ್ರೆಂಡ್‌ ಆಗಿದೆ.

 

ಜಾಹೀರಾತು




 


  







Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget