ಪ್ರವಾಸಿಗರ,ಸ್ಥಳೀಯರ ಮೋಜು ಮಸ್ತಿಗೆ ನಿಷೇಧಕ್ಕೊಳಗಾಯಿತು ಕಬ್ಬಿನಾಲೆ ಫಾಲ್ಸ್!-Times of karkala

 

ಜಾಹೀರಾತು 

ಜಾಹೀರಾತು 

ಜಾಹೀರಾತು 

 ಜಾಹೀರಾತು 

 ಜಾಹೀರಾತು 
 ಜಾಹೀರಾತು 

  ಜಾಹೀರಾತು 


ಪ್ರವಾಸಿಗರ,ಸ್ಥಳೀಯರ ಮೋಜು ಮಸ್ತಿಗೆ ನಿಷೇಧಕ್ಕೊಳಗಾಯಿತು ಕಬ್ಬಿನಾಲೆ ಫಾಲ್ಸ್!-Times of karkala


ಪ್ರಕೃತಿ ನಮಗೆ ಬೇಕಾದ ಎಲ್ಲವನ್ನೂ ಕೊಡುತ್ತೆ, ನಮ್ಮಂತೆ ನೂರಾರು ಜೀವಿಗಳಿಗೆ ಆಸರೆ ನೀಡುತ್ತದೆ.
ಮಾನವ ಜೀವಿಯಾದ ನಾವು ಪ್ರಕೃತಿಯನ್ನು ಹೆಚ್ಚಾಗಿ ಉಪಯೋಗಿಸಿಕೊಳ್ಳುವುದು. ಮನಸ್ಸಿಗೆ ದುಃಖವಾದಾಗ ಮನ ಶಾಂತಿಗಾಗಿ ಅಥವಾ ಕುಟುಂಬಸ್ಥರೊಂದಿಗೆ, ಗೆಳೆಯರೊಂದಿಗೆ ಮೋಜು ಮಸ್ತಿ ಮಾಡಲು ಪ್ರಕೃತಿಯ ಸೊಬಗನ್ನು ಸವಿಯಲು ಹತ್ತಿರದ ಪ್ರವಾಸಿ ತಾಣಗಳಿಗೆ ಹೋಗುತ್ತಿರುತ್ತೇವೆ. ಯಾವ ಪ್ರವಾಸ ಧಾಮಗಳಿಗೆ ಭೇಟಿ ನೀಡುತ್ತೇವೆ ನಾವು ಅಲ್ಲಿನ ಪರಿಸರವನ್ನು ಹಾಳು ಮಾಡದೆ, ಅಲ್ಲಿರುವ ವಸ್ತುಗಳಿಗೆ ಹಾನಿ ಮಾಡದೆ ಬರುವುದು ನಾವು ಪ್ರಕೃತಿಗೆ ಮತ್ತು ಅದನ್ನು  ನಿಭಾಯಿಸುತ್ತಿರುವ ಅಲ್ಲಿನ ವ್ಯವಸ್ಥ ತಂಡಕ್ಕೆ ನೀಡುವ ಅಮೂಲ್ಯವಾದ ಕೊಡುಗೆ...

ಆದರೆ ಇತ್ತೀಚಿನ ದಿನಗಳಲ್ಲಿ ಜನ ಕಡಿಮೆ ಇರುವ ಅಂದರೆ ಅರಣ್ಯ ಇಲಾಖೆಗಳು ಅಥವಾ ಸರ್ಕಾರಗಳು ಇನ್ನೂ  ಪ್ರವಾಸಿ ತಾಣ ಎಂದು ಘೋಷಿಸಿದೆ ಇರುವ ಸ್ಥಳಗಳಲ್ಲಿ ಅಲ್ಲಿಯೇ ಅಲ್ಪ ಸ್ವಲ್ಪ ದೂರದಲ್ಲಿರುವ ಮನೆಯವರು ಹೋಗಿ ಅಲ್ಲಿರುವ ಸುಂದರವಾದ ಪ್ರಕೃತಿಯನ್ನು ಸವಿದು ಫೋಟೋಗಳನ್ನು ಸಾಮಾಜಿಕ ಜಾಲತಾಣ ಹಾಕುತ್ತಾರೆ. ಅದನ್ನು ಗಮನಿಸಿದ ಪ್ರವಾಸಿಗರು ಆ ಸ್ಥಳಕ್ಕೆ ಗೆಳೆಯರೊಂದಿಗೆ ಭೇಟಿ ನೀಡಿ ಮೋಜು-ಮಸ್ತಿ, ಪಾರ್ಟಿ ( ಹೆಚ್ಚಾಗಿ ಮದ್ಯಪಾನ) ಮಾಡುವುದು ಸಹಜ. ಅದು ದೊಡ್ಡ ತಪ್ಪಲ್ಲ.

ಆದರೆ ಅಲ್ಲಿಗೆ ಗೆಳೆಯರೊಂದಿಗೆ ಹೋದವರು ಪಾರ್ಟಿ ಮಾಡಿ ಮದ್ಯಪಾನದ ಬಾಟಲುಗಳನ್ನು ಹೊಡೆದು ಹಾಕುವುದು, ಪ್ಲಾಸ್ಟಿಕ್ ಗಳನ್ನು, ಕಸಗಳನ್ನು , ಬಟ್ಟೆಗಳನ್ನು ನೀರಿಗೆ ಅಥವಾ ಅಲ್ಲೇ ಹತ್ತಿರ ಬಿಸಾಕಿ ಹೋಗುವುದು ಮತ್ತು ಅಲ್ಲಿ ಅರಣ್ಯ ಇಲಾಖೆಗಳು ಹಾಕಿರುವ ಫಲಕಗಳನ್ನು ಕೆಡವುದು. ಅಲ್ಲಿರುವ ಪ್ರಾಣಿಗಳಿಗೆ ಕಲ್ಲು ಬಿಸಾಕುವುದು, ಇನ್ನೂ ಹಲವಾರು ರೀತಿಯಲ್ಲಿ ಪ್ರಕೃತಿಯ ಸೊಬಗನ್ನು ಇಂದಿನ ನವಪ್ರವಾಸಿಗರು ಹಾಳು ಮಾಡುತ್ತಿರುವುದು ವಿಪರ್ಯಾಸವೇ ಸರಿ.

ಪ್ರವಾಸಿಗರ, ಅಲ್ಲಿನ ಹತ್ತಿರದ ಜನರ ಉಪಟಳ ತಾಳಲಾರದೆ ಅರಣ್ಯ ಇಲಾಖೆ ಅದೆಷ್ಟು ಸುಂದರವಾದ ಪ್ರಕೃತಿಯ ಸೌಂದರ್ಯವನ್ನು ಸವಿಯಲು ನಿಷೇಧ ಮಾಡಿದ್ದಾರೆ. ಅಂತಹ ಸ್ಥಳದಲ್ಲಿ ಇವತ್ತು ನಾವು ಭೇಟಿ ನೀಡಿದ ಕಬ್ಬಿನಾಲೆ ಫಾಲ್ಸ್ ಕೂಡ ಒಂದು.

ಪ್ರಕೃತಿ ಮುನಿದರೆ ಏನಾಗುತ್ತದೆ ಎಂಬುದನ್ನು ಪಂಕಜಾ.ಕೆ. ಮುಡಿಪು.ಕುರ್ನಾಡು ಅವರು ಅದ್ಭುತವಾಗಿ ವರ್ಣಿಸಿದ್ದಾರೆ.

ಗುಡ್ಡ ಬೆಟ್ಟಗಳ ಕಡಿದು
ಭೂತಾಯಿ ಗರ್ಭವ ಕೊರೆದು
ಬಗೆದು ಹರಣ ಮಾಡಿ
ಅಟ್ಟಹಾಸದಿ ಮೆರೆದೇ ನೀ

ಮಾನವನ ಕ್ರೂರತೆಗೆ
ಬಲಿಯಾಗಿ ನರಳಿದಳು
ಕಣ್ಣೀರಿಟ್ಟು  ದಿನ ದಿನವೂ
ನವೆದಳು  ಸವೆದಳು
ಕೆಣಕಿದೆ ಆಕೆಯ ಸಹನೆಯನೀ

ಇಂದೀಗ ಮುನಿದಳು ಆತಾಯಿ
ವರುಣನ ರುದ್ರ ನರ್ತನ
ಗುಡ್ಡ ಬೆಟ್ಟಗಳ ಕುಸಿತ
ಎಲ್ಲೆಲ್ಲೂ ಜಲಪ್ರಳಯ

ಮನೆ ಮಠಗಳು ಕೊಚ್ಚಿಹೋಗಿ
ಭೀಕರ ಪ್ರವಾಹ  ಬಂದು
ಪ್ರಕೃತಿ ಮುನಿದರೆ ಮನುಜ
ಏನಿದೆ ನಿನಗೆ ಈಗ

ಮೇಲು ಕೀಳು ನಾನು ನನ್ನದು
ಎಂದು ನಿತ್ಯ ಜಗಳವ ಮಾಡಿ
ಅಹಂಕಾರದಿ ಮೆರೆದಾಡಿದೆ
ಪ್ರಕೃತಿ ಲೂಟಿಯ ನಿತ್ಯ ಗೈದೆ

ಪ್ರಕೃತಿ ಮುನಿದಾಗ
ಜೀವ ಉಳಿಸಲು  ಇಂದೀಗ
ನೀ ಪರದಾಡುತಿರುವೆ
ಪ್ರಕೃತಿ ಮುನಿದಾಗ
ಮನುಜಗೆಲ್ಲಿದೆ ಜಾಗ

ಎಲ್ಲವೂ ಜಲಪ್ರಳಯದಲಿ
ಕೊಚ್ಚಿ ಹೋಗಿ
ಇರುವುದೊಂದೆ ಜೀವ
ಬೇಕಿತ್ತೆ ನಿನಗೆ ಈ ಅಹಂಕಾರ
ಮೋಹಮದ ಮಮಕಾರ
ಪ್ರಕೃತಿಯ ಹರಣ ಮಾಡುವ
ಈ ನೀಚಬುದ್ಧಿ.....

ಪ್ರಕೃತಿಯೊಂದಿಗೆ ಚೆಲ್ಲಾಡುತ್ತಿರುವ ಮಾನವನಿಗೆ ಬುದ್ಧಿ ಕಲಿಸಲು ಪ್ರತಿ ಬಾರಿ ಭೂ ಕುಸಿತ, ಪ್ರವಾಹದ ರೀತಿಯಲ್ಲಿ ತನ್ನ ನೋವನ್ನು ತೋರ್ಪಡಿಸುತ್ತಿದೆ... ಆದರೂ ಮಾನವ ಸುಧಾರಣೆ ಆಗುತ್ತಿಲ್ಲ. ಈ ಬಾರಿ ರಾಜಸ್ಥಾನ, ಬಿಹಾರದಲ್ಲಿ ಪ್ರವಾಹದಿಂದ ಅದೆಷ್ಟೋ ಸಾವಿರ ಜನ ಸಾಯುತ್ತಿದ್ದಾರೆ.ದಯವಿಟ್ಟು ಇನ್ನಾದರೂ ಪ್ರಕೃತಿಯನ್ನು ಹಾಳು ಮಾಡದೆ, ಸಂರಕ್ಷಿಸಿ, ಸರ್ಕಾರದ ನಿಯಮಗಳನ್ನು ಪಾಲಿಸಿ ಪ್ರಕೃತಿಯ ಸೊಬಗನ್ನು ನಾವೆಲ್ಲರೂ ಸವಿಯೋಣ.

#SaveTheNature
#EnjoyTheBeautyOfNature

- Suki Shetty
ಜಾಹೀರಾತು 
 
  ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget