ಕಾರ್ಕಳದ 75 ವರ್ಷದ ಪುರುಷ ಸೇರಿದಂತೆ ಜಿಲ್ಲೆಯಲ್ಲಿ ಒಂದೇ ದಿನ 10 ಮಂದಿ ಸಾವು:ಕಾರ್ಕಳದ 44 ಮಂದಿಗೆ ಸೋಂಕು-Times of karkala

ಕಾರ್ಕಳದ 75 ವರ್ಷದ ಪುರುಷ ಸೇರಿದಂತೆ ಜಿಲ್ಲೆಯಲ್ಲಿ ಒಂದೇ ದಿನ 10 ಮಂದಿ ಸಾವು:ಕಾರ್ಕಳದ 44 ಮಂದಿಗೆ ಸೋಂಕು-Times of karkala

ಉಡುಪಿ:ಜಿಲ್ಲೆಯಲ್ಲಿ ಗುರುವಾರ 217 ಮಂದಿಗೆ ಕೋವಿಡ್- 19 ಸೋಂಕು ದೃಢಪಟ್ಟಿದ್ದು, 10 ಮಂದಿ ಮೃತಪಟ್ಟಿದ್ದಾರೆ.ಹಲವು ರೋಗಗಳ ಜತೆಗೆ ಕರೊನಾ ಪಾಸಿಟಿವ್ ಹೊಂದಿದ್ದ ಕುಂದಾಪುರ ತಾಲೂಕಿನ 82 ಮತ್ತು 52 ವರ್ಷದ ಪುರುಷರು, ಉಡುಪಿಯಲ್ಲಿ 76, 70, 55 ಮತ್ತು 36 ವರ್ಷದ ಪುರುಷರು, ಬೈಂದೂರಿನ 75 ವರ್ಷದ ಪುರುಷ, ಬಾರ್ಕೂರಿನ 76 ವರ್ಷದ ಪುರುಷ, ಸಾಯ್ಬರಕಟ್ಟೆಯ 70 ವರ್ಷದ ಪುರುಷ, ಕಾರ್ಕಳದಲ್ಲಿ 75 ವರ್ಷದ ಪುರುಷ ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 54ಕ್ಕೆ ತಲುಪಿದೆ.

ಗುರುವಾರ ಪತ್ತೆಯಾದ ಸೋಂಕಿತರಲ್ಲಿ ಉಡುಪಿಯ 90, ಕುಂದಾಪುರದ 81, ಕಾರ್ಕಳದ 44 ಹಾಗೂ ಹೊರ ಜಿಲ್ಲೆಯ ಇಬ್ಬರು ಸೇರಿದ್ದಾರೆ. 34 ಮಂದಿ ಆಸ್ಪತ್ರೆಗಳಿಂದ, 51 ಮಂದಿ ಹೋಂ ಐಸೋಲೇಶನ್‌ನಿಂದ ಬಿಡುಗಡೆ ಹೊಂದಿದ್ದಾರೆ. 1054 ಆಸ್ಪತ್ರೆಯಲ್ಲಿ, 1099 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕರೊನಾ ನಿಯಂತ್ರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರಿಗೆ ಪಾಸಿಟಿವ್ ಬಂದಿದೆ. ರೋಗ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ತಪಾಸಣೆ ನಡೆಸಿದ್ದು, ಗುರುವಾರ ಬಂದ ವರದಿಯಲ್ಲಿ ಸೋಂಕು ದೃಢವಾಗಿದೆ. ಹೋಮ್ ಐಸೊಲೇಶನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget