ಕಾಂತಾವರ:ರಾಜ್ಯದಲ್ಲಿಯೇ ಮಾದರಿ ಕಾರ್ಯಕ್ರಮ ಪರಿಸರ ಉತ್ಸವ
ಕಾಂತಾವರ ಗ್ರಾಮದ ಮದಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪರಿಸರ ಉತ್ಸವ ಕಾರ್ಯಕ್ರಮ ನಡೆಯಿತು.
ರಾಜ್ಯದಲ್ಲೇ ಮಾದರಿ ಕಾರ್ಯಕ್ರಮ ಕಾರ್ಕಳ ಕ್ಷೇತ್ರದ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಪರಿಸರ ಉತ್ಸವ-2020 ಈ ಭಾರಿ ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ.ಸ್ತ್ರೀಶಕ್ತಿ ಗುಂಪು ಮದಕ ಮಹಿಳಾ ಸ್ವಸಹಾಯ ಗುಂಪು ಹಾಗೂ ವಿವಿಧ ಸಂಘ ಸಂಸ್ಥೆಗಳನ್ನು ಸೇರಿಕೊಂಡು ಕಾಂತಾವರ ಮದಕ ಸರಕಾರಿ ಶಾಲೆಯ ಆವರಣದ ಸುತ್ತಮುತ್ತ ಸಸಿಗಳನ್ನು ನೆಟ್ಟು ಪರಿಸರ ಉತ್ಸವವನ್ನು ಎಲ್ಲಾ ಪ್ರಮುಖರ ಸಹಕಾರದಿಂದ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಾಂತಾವರ ಮದಕ ಅಂಗನವಾಡಿ ಕಾರ್ಯಕರ್ತೆಯರಾದ ಸುಜಾತ ಕಾರ್ಕಳ ತಾಲೂಕು ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿಯಾದ ನವೀನ ಎಸ್ ಸಾಲ್ಯಾನ್ , ಬಿಜೆಪಿ ಕಾಂತಾವರ ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕೋಟ್ಯಾನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಂತಾವರ ವಲಯದ ಸೇವಾ ಪ್ರತಿನಿಧಿ ಶಶಿಕಲಾ ನಾಯಕ್ ಹಾಗೂ ಸ್ಥಳೀಯರಾದ ಆನಂದ್ ಹಾಗೂ ಸ್ಥಳೀಯ ಎಲ್ಲಾ ಪ್ರಮುಖರು ಭಾಗಿಯಾಗಿದ್ದರು.


Post a comment