ಕಾರ್ಕಳ:'ಮಾಧ್ಯಮದ ರಕ್ಷಣೆ ಸರ್ಕಾರದ ಹೊಣೆ'-Times Of Karkala
ಕಾರ್ಕಳ,ಆ 21:ಮಾಧ್ಯಮದವರ ಮೇಲೆ ಪ್ರಹಾರ ನಡೆಸುವುದು ಖಂಡನೀಯ. ಅಹಿತಕರ ಘಟನೆ ನಡೆದಾಗ ಮಾದ್ಯಮದವರತ್ತ ಬೊಟ್ಟು ಮಾಡುತ್ತಿರುವುದು ನಿಜಕ್ಕೂ ವಿಷಾದನೀಯ. ಸರ್ಕಾರ ಕಾನೂನು ಸುವ್ಯವಸ್ಥೆಗೆ ಆದ್ಯತೆ ಕೊಟ್ಟು ಪರಿಸ್ಥಿತಿಯನ್ನು ನಿಯಂತ್ರಿಸಬೇಕು.ಪ್ರಜಾಪ್ರಭುತ್ವದ ಆಧಾರ ಸ್ತಂಭವಾದ ಮಾಧ್ಯಮದ ರಕ್ಷಣೆ ಸರಕಾರದ ಹೊಣೆ. ಮಾಧ್ಯಮದ ರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯಿಸಿದೆ.
ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪತ್ರಕರ್ತರ ಸಂಘ ಮೇಲಿನ ನಿರ್ಣಯ ಕೈಗೊಂಡಿತು. ಸಿಜಿಕೆ ಪ್ರಶಸ್ತಿ ಪುರಸ್ಕೃತ ಚಂದ್ರನಾಥ ಬಜಗೋಳಿ, ಶ್ರೀನಿವಾಸ್ ಭಟ್ ಪ್ರಶಸ್ತಿ ಪುರಸ್ಕೃತ ಶರತ್ ಶೆಟ್ಟಿ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪತ್ರಕರ್ತರಲ್ಲಿ ಕಲೆಯ ಆಸಕ್ತಿ ಇದ್ದರೆ ಸಂವಹನ ಹೆಚ್ಚು ಪರಿಣಾಮಕಾರಿ ಎಂದರು.
ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದ್ ಅಧ್ಯಕ್ಷ ಆರ್ ಬಿ ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಣೇಶ್ ನಾಯಕ್ , ಮಹಮ್ಮದ್ ಷರೀಫ್, ಕೆ ಎಂ, ಖಲೀಲ್ ಉಪಸ್ಥಿತರಿದ್ದರು.
Post a comment