ಪತ್ನಿ ಮೇಲೆ ಅಪ್ರಾಪ್ತರಿಂದ ಅತ್ಯಾಚಾರ: ಪತ್ನಿ ಹೇಳಿದಂತೆ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ-Times of karkala

ಪತ್ನಿ ಮೇಲೆ ಅಪ್ರಾಪ್ತರಿಂದ ಅತ್ಯಾಚಾರ: ಪತ್ನಿ ಹೇಳಿದಂತೆ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪತಿ-Times of karkala 


ಚಂಡೀಗಢ:ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಹಿಸರ್ ಜಿಲ್ಲೆಯಲ್ಲಿ ನಡೆದಿದೆ.ಮೃತ ವ್ಯಕ್ತಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಪತ್ನಿ ಗರ್ಭಿಣಿ ಎಂದು ತಿಳಿದುಬಂದಿದೆ. ಈತ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್‍ನೋಟ್ ಬರೆದಿಟ್ಟಿದ್ದಾನೆ. ಇಬ್ಬರು ಅಪ್ರಾಪ್ತ ಹುಡುಗರು ನನ್ನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಡೆತ್‍ನೋಟಿನಲ್ಲಿ ಬರೆದಿದ್ದಾನೆ. ಇಬ್ಬರು ಅತ್ಯಾಚಾರ ಆರೋಪಿಗಳು ಮೃತ ಕಾರ್ಮಿಕ ವಾಸಿಸುತ್ತಿದ್ದ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

ಆಗಸ್ಟ್ 15 ರಂದು ಕಾರ್ಮಿಕನು ತನ್ನ ಗ್ರಾಮದಿಂದ ಹೊರಗೆ ಹೋಗಿದ್ದನು. ಆತನ ಮನೆಗೆ ಹಿಂದಿರುಗಿದಾಗ ಪತ್ನಿ ಅಳುತ್ತಿದ್ದಳು. ನಂತರ ಪತ್ನಿ ಹಳ್ಳಿಯ ಇಬ್ಬರು ಅಪ್ರಾಪ್ತ ಯುವಕರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾಳೆ.

ನೀವು ನನ್ನನ್ನು ಕೊಲೆ ಮಾಡು ಎಂದು ಪತ್ನಿ ಹೇಳಿದಳು. ಅದಕ್ಕೆ ನಾನು ಕೊಲೆ ಆರೋಪಿಯಾಗುತ್ತೇನೆ ಎಂದೆ. ನಂತರ ಪತ್ನಿ ಈಗ ಏನು ಮಾಡುವುದು ಎಂದು ಕೇಳಿದಳು. ಆಗ ನಾನು ನಿನ್ನನ್ನು ಕೊಂದ ನಂತರ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿದೆ. ಅಲ್ಲದೇ ನಮಗೆ ಸಾವನ್ನು ಹೊರತುಪಡಿಸಿ ಬೇರೆ ದಾರಿ ಇರಲಿಲ್ಲ ಎಂದು ಬರೆದಿದ್ದಾನೆ.ಅಷ್ಟೇ ಅಲ್ಲದೇ ಕಾರ್ಮಿಕನು ಆರೋಪಿಗಳ ಹೆಸರನ್ನು ಉಲ್ಲೇಖಿಸಿದ್ದು, “ನಾವು ನಮ್ಮ ಮಗುವನ್ನು ಸಹ ಕೊಲ್ಲಬೇಕು” ಎಂದು ಉಲ್ಲೇಖಿಸಿದ್ದಾನೆ. ಘಟನೆಯ ನಂತರ ಮಹಿಳೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

ಸಹೋದರಿಯ ಸಾವಿನ ಸುದ್ದಿ ತಿಳಿದು ಸಹೋದರ ಮನೆಗೆ ಬಂದು ನೋಡಿದ್ದಾನೆ. ಆಗ ಕಾರ್ಮಿಕ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಈ ಕುರಿತು ಐಪಿಸಿ ಸೆಕ್ಷನ್ ಅಡಿಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

 

ಜಾಹೀರಾತು




 


  



Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget