ಮಲೆಕುಡಿಯ ಸಂಘ:ಈದು ಗ್ರಾಮ ಸಮಿತಿ ಪುನಾರಚನೆ-Times Of Karkala
ಈದು, ಆ 23: ಭಾನುವಾರದಂದು ಮಲ್ಲಂಜ ಅಂಗನವಾಡಿ ಕೇಂದ್ರದ ವಠಾರದಲ್ಲಿ ಜರುಗಿದ ಈದುವಿನ ಮಲೆಕುಡಿಯ ಗ್ರಾಮ ಸಮಿತಿಯ ಮಾಸಿಕ ಸಭೆಯಲ್ಲಿ ಗ್ರಾಮ ಸಮಿತಿಯನ್ನು ಪುನಾರಚಿಸಲಾಯಿತು. ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಸದಾನಂದ ಗೌಡ ಕೇರ, ಉಪಾಧ್ಯಕ್ಷರಾಗಿ ಶ್ರೀಮತಿ ಜಾನಕಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಗೌಡ ತಾರೆದಿಡ್ಡು, ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಲೀಲಾವತಿ ಬಾರೆ, ಕೋಶಾಧಿಕಾರಿಯಾಗಿ ಕುಮಾರಿ ವಿಜಯ ಮಠದಮನೆ, ಸಂಘಟನಾ ಕಾರ್ಯದರ್ಶಿಗಳಾಗಿ ಸುಕೇಶ್ ಗೌಡ ಕೇರ, ಸುಕೇಶ್ ಕುರ್ಮದಪಲ್ಕೆ ಆಯ್ಕೆಯಾದರು.
ಮಲೆಕುಡಿಯ ಸಂಘ ಕಾರ್ಕಳ ತಾಲೂಕು ಸಮಿತಿಯ ಅಧ್ಯಕ್ಷ ಪ್ರಶಾಂತ್ ಹೆರ್ಮುಂಡೆ ಇವರ ಅಧ್ಯಕ್ಷತೆಯಲ್ಲಿ ಈ ಆಯ್ಕೆ ನಡೆದಿತ್ತು. ಈ ವೇಳೆ ರಾಜ್ಯ ಮಲೆಕುಡಿಯ ಸಂಘದ ಸಂಘಟನಾ ಕಾರ್ಯದರ್ಶಿ ಗಂಗಾಧರ ಗೌಡ ಈದು, ಮಲೆಕುಡಿಯ ಸಂಘ ಕಾರ್ಕಳ ತಾಲೂಕು ಸಮಿತಿಯ ಉಪಾಧ್ಯಕ್ಷ ಗೋಪಾಲ ಗೌಡ ಮಾಳ, ಪ್ರಧಾನ ಕಾರ್ಯದರ್ಶಿ ಅಶೋಕ ಗೌಡ ಕೆರ್ವಾಶೆ ಹಾಗೂ ಗ್ರಾಮ ಸಮಿತಿಯ ಸದಸ್ಯರುಗಳು ಉಪಸ್ಥಿತಿದ್ದರು.
ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಗೌಡ ತಾರೆದಿಡ್ಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು
Post a comment