ಉಡುಪಿ: ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅಂಧ ವಿದ್ಯಾರ್ಥಿನಿಗೆ ಮೊಬೈಲ್ ವಿತರಣೆ-Times Of Karkala

ಉಡುಪಿ: ಜಿಲ್ಲಾ ಮಹಿಳಾ ಕಾಂಗ್ರೆಸ್  ವತಿಯಿಂದ ಅಂಧ ವಿದ್ಯಾರ್ಥಿನಿಗೆ ಮೊಬೈಲ್ ವಿತರಣೆ-Times Of Karkala

ಉಡುಪಿ:ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸ್ ಜನ್ಮದಿನಾಚರಣೆ ಪ್ರಯುಕ್ತ ಬೈಂದೂರು ಕಿರಿಮಂಜೇಶ್ವರದ ದೃಷ್ಟಿ ಹೀನ ಹಾಗೂ ಬಡ  ಪ್ರತಿಭಾವಂತ ವಿದ್ಯಾರ್ಥಿನಿ ಕು.ಮೇಘನಾ ಅವರಿಗೆ ಆನ್ ಲೈನ್ ತರಗತಿಗೆ ಸಹಾಯ ವಾಗುವಂತೆ ಒಂದು ಸ್ಮಾರ್ಟ್ ಫೋನ್ ಅನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ  ವತಿಯಿಂದ ಇಂದು ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆಯವರು ಪ್ರಾಸ್ತಾವಿಕವಾಗಿ ಮಾತನಾಡಿ "ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಷ್ಮಿತಾ ದೇವ್ ಅವರ ಆದೇಶದಂತೆ ದೇಶಾದ್ಯಂತ ಪ್ರತೀ ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ.ಬಡತನದ ನಡುವೆ ದೃಷ್ಟಿದೋಷದ ಸಮಸ್ಯೆ ಯಿಂದ ಬಳಲುತ್ತಿದ್ದರೂ,ಅದನ್ನು ಮೆಟ್ಟಿನಿಂತು ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಮೇಘನಾ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ"ಎಂದರು.ನಗರಸಭೆಯ ಮಾಜಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ ಅವರು ಮೇಘನಾ ಅವರನ್ನು ಸಭೆಗೆ ಪರಿಚಯಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ಅವರು ಶಾಲು ಹೊದಿಸಿ ಅಭಿನಂದಿಸಿದರು.

ವೇದಿಕೆಯಲ್ಲಿ  ಮಾಜಿ ಶಾಸಕ ಶ್ರೀ ಯು ಆರ್ ಸಭಾಪತಿ, ಶ್ರೀ ವಿನಯ ಕುಮಾರ್ ಸೊರಕೆ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಕೊಡವೂರು,ಹಿರಿಯ ನಾಯಕಎಂ.ಎ.ಗಫೂರ್,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ವಿಶ್ವಾಸ್ ಅಮೀನ್,ಆರ್ ಜಿ ಪಿ ಆರ್.ಎಸ್ ಜಿಲ್ಲಾ ಸಂಯೋಜಕಿ ಶ್ರೀಮತಿ ರೋಶನಿ ಒಲಿವರ್,ಡಾ.ಸುನೀತಾ ಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ಶ್ರೀಮತಿ ಚಂದ್ರಿಕಾ ಶೆಟ್ಟಿ, ಸಂಧ್ಯಾ ಶೆಟ್ಟಿ,ಗೋಪಿ ನಾಯ್ಕ್,ಚಂದ್ರಾವತಿ ಭಂಡಾರಿ,ಸುಗಂಧೀ ಶೇಖರ್,ಸರಸು. ಡಿ.ಬಂಗೇರಾ,ರಾಜೀವಿ,ಜ್ಯೋತಿ ಮೆನನ್,ಪ್ರಮೀಳಾ ಜತ್ತನ್ನ,ಸುಮಾ ಸುರೇಂದ್ರ,ರಮಾದೇವಿ,ಹರೀಶ್ ಕಿಣಿ,ಪ್ರಶಾಂತ್ ಜತ್ತನ್ನ,ಮುರಳೀ ಶಟ್ಟಿ ,ಯತೀಶ್ ಕರ್ಕೇರಾ, ನರಸಿಂಹ ಮೂರ್ತಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಶ್ರೀ ಭಾಸ್ಕರ ರಾವ್ ಕಿದಿಯೂರು ಮುಂತಾದವರು ಉಪಸ್ಥಿತರಿದ್ದರು.

 

ಜಾಹೀರಾತು
 


  Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget