ಪಡುಬಿದ್ರಿ:ಎಚ್ಚರಿಕೆ! ವಿನಾಕಾರಣ ಬೀಚ್ ಗೆ ಬರಬೇಡಿ,ಬೀಚ್ ವ್ಯಾಪ್ತಿಯಲ್ಲಿ ಹೆಚ್ಚುತ್ತಿದೆ ಕೊರೋನಾ-Times of karkala




ಜಾಹೀರಾತು 

ಜಾಹೀರಾತು 

ಜಾಹೀರಾತು 

 ಜಾಹೀರಾತು 

 ಜಾಹೀರಾತು 
 ಜಾಹೀರಾತು 

  ಜಾಹೀರಾತು 

ಪಡುಬಿದ್ರಿ:ಎಚ್ಚರಿಕೆ ವಿನಾಕಾರಣ ಬೀಚ್ ಗೆ ಬರಬೇಡಿ. ಬೀಚ್ ವ್ಯಾಪ್ತಿಯಲ್ಲಿ ಹೆಚ್ಚುತ್ತಿದೆ ಕೊರೋನಾ-Times of karkala 


ಪಡುಬಿದ್ರಿ: ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಪಡುಬಿದ್ರಿ ಬೀಚ್ ವ್ಯಾಪ್ತಿಯಲ್ಲಿಯೂ 5  ಜನರಿಗೆ ಕೊರೋನಾ ದೃಢಪಟ್ಟಿದೆ.ಇದರಿಂದಾಗಿ ಪ್ರವಾಸಿಗರು ವಿನಾಕಾರಣ ಬೀಚ್ ಬಳಿ ಬಾರದಂತೆ ಬೀಚ್ ವ್ಯಾಪ್ತಿಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವನ್ನು ಎಚ್ಚರಿಕೆ ಸಂದೇಶವನ್ನು ಕಳುಹಿಸುತ್ತಿದ್ದಾರೆ.

ಲಾಕ್ ಡೌನ್ ನಿಂದಾಗಿ ಬಹುತೇಕ ಜನರಿಗೆ ರಜೆ ಘೋಷಣೆಯಾಗಿದೆ ಆದರೆ ಜನರು ಈ ರಜೆಯಲ್ಲಿ ಮನೆಯಲ್ಲಿ ಕೂರದೆ ಹೊರಗಡೆ ಸುತ್ತಾಡುತ್ತಿದ್ದಾರೆ. ಮಾಸ್ಕ್ ಸಾಮಾಜಿಕ ಅಂತರ ಇಲ್ಲದೆ ಬೀಚ್ ನಲ್ಲಿ ಮಜಾ ಮಾಡುತ್ತಿದ್ದಾರೆ. ಕುಟುಂಬ ಸಮೇತರಾಗಿ ಬೀಚ್ ನಲ್ಲಿ ಕಾಲ ಕಳೆಯುತ್ತಿರುವುದು ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆತಂದಂತೆ. ಅಲ್ಲದೆ ದೂರದೂರಿನಿಂದ ಬಂದು ಬೀಚ್ ನಲ್ಲಿ ಕಾಲ ಕಳೆಯುವುದರಿಂದ ಸ್ಥಳೀಯರಿಗೂ ಕೊರೋನಾ ಹರಡುವ ಅಪಾಯವಿದೆ. ಎಲ್ಲರಿಗೂ ಬದುಕುವ ಹಕ್ಕಿದೆ. ಇದರ ಬಗ್ಗೆ ಪಡಬಿದ್ರಿ ಠಾಣಾಧಿಕಾರಿ ಸಹಿತ ಕಂದಾಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ.



ಇದೆ ರೀತಿ ಬೇಜವಾಬ್ದಾರಿ ಮುಂದುವರಿದಲ್ಲಿ ಸಾರ್ವಜನಿಕರೇ ನಿಯಂತ್ರಿಸುವ ಹಂತಕ್ಕೆ ಬರಬಹುದು.ಆದುದರಿಂದ ಸಿಕ್ಕ ರಜೆಯನ್ನು ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉಪಯೋಗಿಸಿ ಹೊರತು ರೋಗ ಪಸರಿಸುವ ಕಾರ್ಯಕ್ಕಲ್ಲ ಎಂದು ಸ್ಥಳೀಯ ಜನರ ಹೆಸರಿನಲ್ಲಿ ಸಂದೇಶ ವೈರಲ್ ಆಗುತ್ತಿದೆ.

ಜಾಹೀರಾತು 
 

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget