ಬಡತನದಲ್ಲಿ ಅರಳಿದ ಮಲೆಕುಡಿಯರ ಕುಡಿ -ನೆರವಿನ ನಿರೀಕ್ಷೆಯಲ್ಲಿ ಸುನಿಲ್-Times of Karkala

ಬಡತನದಲ್ಲಿ ಅರಳಿದ ಮಲೆಕುಡಿಯರ ಕುಡಿ -ನೆರವಿನ ನಿರೀಕ್ಷೆಯಲ್ಲಿ ಸುನಿಲ್-Times of Karkala

ಹೆಬ್ರಿ,ಆ.20: ಮುದ್ರಾಡಿಯ ಗ್ರಾಮೀಣ ಪ್ರದೇಶವಾದ   ಬಲ್ಲಾಡಿ ಗಾಳಿಪಡ್ಪುವಿನ  ಪರಿಶಿಷ್ಟ ಪಂಗಡದ ಬಡ ಮಲೆಕುಡಿಯ ಕುಟುಂಬದ ಅರಳುವ ಪ್ರತಿಭೆ ಸುನಿಲ್. ತಂದೆಯ ಆಸರೆ ಇಲ್ಲದೆ, ದುಡಿಯುವ ಗಂಡಸರಿಲ್ಲದ ತನ್ನ ಪುಟ್ಟ ಮನೆಯಿಂದ ತಂಗಿಯೊಂದಿಗೆ ಕಾಡಿನ ಮಧ್ಯೆ 5 ಕಿ.ಮೀ ನಡೆದೇ ಶಾಲೆಗೆ ತೆರಳಿ 10ನೇ ತರಗತಿ ಪೂರೈಸಿದ್ದಾನೆ. ಕಲಿಯುತ್ತಿದ್ದ ಮುದ್ರಾಡಿ ಎಂಎನ್‍ಡಿಎಸ್‍ಎಂ ಅನುದಾನಿತ  ಪ್ರೌಢಶಾಲೆಯಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪಬ್ಲಿಕ್ ಪರೀಕ್ಷೆಯಲ್ಲಿ 559 ಅಂಕ ಪಡೆದು ಶಾಲೆಗೆ ಮೊದಲಿಗನಾಗಿದ್ದಾನೆ. ಕನ್ನಡದಲ್ಲಿ 123, ಸಮಾಜ ವಿಜ್ಞಾನದಲ್ಲಿ 99 ಹಿಂದಿಯಲ್ಲಿ 97 ಅಂಕದೊಂದಿಗೆ ಶೇ.89.44 ಫಲಿತಾಂಶ ಪಡೆದಿದ್ದಾನೆ. ಮುಂದೆ ವಾಣಿಜ್ಯ ವಿಭಾಗದಲ್ಲಿ  ಕಲಿತು ಸಿಎ ಮಾಡುವ ಕನಸು ಕಂಡಿದ್ದಾನೆ.


ತಂಗಿ ಸುಶ್ಮಿತಾ 8ನೇ ತರಗತಿ ಓದುತ್ತಿದ್ದು ಅವಳ ಓದು ನಿಲ್ಲಬಾರದು ಎನ್ನುವ ಈತ ತನ್ನ ಕಲಿಕೆಯ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಕೊರಗುತ್ತಿದ್ದಾನೆ. ತಾಯಿ ಜಯಂತಿ ಗೇರು ಬೀಜ ಫ್ಯಾಕ್ಟರಿಯಲ್ಲಿ ಅಲ್ಪ ಸಂಬಳಕ್ಕೆ ದುಡಿದು ಸಾಲ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದಾರೆ. ಇರಲು ಗುಡಿಸಲು ಬಿಟ್ಟರೆ ಇನ್ನೇನಿಲ್ಲ. ನಿತ್ಯದ  ದುಡಿಮೆಯೂ ಇಲ್ಲ . ವಾರದಲ್ಲಿ ಸಿಗುವ ಒಂದಿಷ್ಟು ಕೆಲಸದಿಂದ ಬಂದ ಹಣದಲ್ಲಿ ಮೂವರ ಸಂಸಾರ ಕಷ್ಟದಲ್ಲಿ ನಡೆಯುತ್ತಿದೆ. ದಿನದ ಮೂರು ಹೊತ್ತಿನ ಊಟಕ್ಕೆ ತತ್ವಾರ ಇರುವ ಸಮಯದಲ್ಲಿ ಮಕ್ಕಳ ಶಿಕ್ಷಣ ಹೇಗೆ ಮುಂದುವರಿಸುವುದು ಎಂಬ ಚಿಂತೆಯಲ್ಲಿರುವ ತಾಯಿಗೆ ಇದೀಗ ಮಗನ ಉನ್ನತ ಶಿಕ್ಷಣದ ಚಿಂತೆ. ಆದರೆ ಮಾಡಿದ ಸಾಲದಿಂದಾಗಿ ಮುಂದೆ ಯಾವುದೇ ಸಾಲ ಮಾಡಬೇಡ ಎಂಬ ತಾಕೀತು ಮಾಡಿರುವ ಸುನಿಲ್ ತನ್ನ ಶಿಕ್ಷಣಕ್ಕೆ ಯಾರಾದರೂ ಆಸರೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾನೆ. ಕಲಿಯುವುದರಲ್ಲಿ, ಗುಣ ನಡತೆಯಲ್ಲಿ, ಶಾಲಾ ಪಠ್ಯೇತರ ಚಟುವಟಿಕೆಯಲ್ಲಿ ಸುನಿಲ್ ಇತರರಿಗೆ ಮಾದರಿ. 

 

ಜಾಹೀರಾತು
 


  
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget