ಎಸ್ಎಸ್ಎಲ್ಸಿ ಫಲಿತಾಂಶ:ಸುಮೇಧಾ ಆಚಾರ್ಯಗೆ ಸನ್ಮಾನ-Times Of Karkala
ಹೆಬ್ರಿ,ಆ 24: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದ ಹೆಬ್ರಿಯ ಸುಮೇಧಾ ಆಚಾರ್ಯ ಅವರನ್ನು ಸಿಟಿ ಲಯನ್ಸ್ ಕ್ಲಬ್ ವತಿಯಿಂದ ಸ್ವಗ್ರಹದಲ್ಲಿ ಶನಿವಾರ ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ಭಾರ್ಗವಿ ಐತಾಳ್, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಜಿ.ಆಚಾರ್ಯ, ಲಯನ್ಸ್ ಕ್ಲಬ್ ಹೆಬ್ರಿ ಸಿಟಿಯ ಸ್ಥಾಪಕ ಅಧ್ಯಕ್ಷ ದಿನಕರ ಪ್ರಭು, ಕಾರ್ಯದರ್ಶಿ ರಾಮಚಂದ್ರ ಭಟ್, ಪೂರ್ವಾಧ್ಯಕ್ಷರಾದ ವಕೀಲ ಕೃಷ್ಣ ಶೆಟ್ಟಿ, ಎಚ್.ರಮೇಶ ಆಚಾರ್ಯ, ಬೇಳಂಜೆ ಹರೀಶ ಪೂಜಾರಿ, ಸುಮೇದಾ ತಂದೆ ವಿಷ್ಣುಮೂರ್ತಿ ಆಚಾರ್ಯ,ಮನೆಯವರು, ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.
Post a comment