ಸಾಣೂರು: ಅಖಂಡ ಭಾರತ ಸಂಕಲ್ಪ ದಿನಾಚರಣೆ-Times Of Karkala
ಕಾರ್ಕಳ, ಆ21 : ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಣೂರು ವಲಯ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಿತು. ಕಾರ್ಯಕರ್ಮದಲ್ಲಿ ಶಿವಾಜಿ ಎಂಬ ನೂತನ ಘಟಕ ಘೋಷಣೆ ಮಾಡಲಾಯಿತು. ಭಾರತ ಮಾತೆ ಪೂಜಾ ಕಾರ್ಯಕ್ರಮ ನಡೆಯಿತು.
ಶ್ರೀ ರಾಮ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. . ಸುನಿಲ್ ಕೆರ್ ದಿಕ್ಸೂಚಿ ಭಾಷಣ ಮಾಡಿದರು.ರಾಘು ಸುವರ್ಣ ಮುಖ್ಯ ಅತಿಥಿಯಾಗಿದ್ದರು. . ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷದ್ ಪ್ರಖಂಡ ಉಪಾಧ್ಯಕ್ಷ ಜಗದೀಶ್ ಪೂಜಾರಿ ಸಾಣೂರು. ಸಹಕಾರ್ಯದರ್ಶಿ ಸುಧೀರ್ ನಿಟ್ಟೆ, ಬಜರಂಗದಳ ಪ್ರಖಂಡ ಸಹಸಂಚಾಲಕ್ ಸುನಿಲ್ ನಿಟ್ಟೆ, ವಿಶ್ವ ಹಿಂದೂ ಪರಿಷದ್ ಸಾಣೂರು ವಲಯ ಅಧ್ಯಕ್ಷರು ದೇವಾನಂದ ಶೆಟ್ಟಿ. ವಲಯ ಕಾರ್ಯದರ್ಶಿ ರಜತ್ ಜತ್ತನ್. ಹಾಗೂ ಬಜರಂಗದಳ ಸಂಚಾಲಕ್ ಶರತ್ ಸಾಣೂರು ಉಪಸ್ಥಿತರಿದ್ದರು.ಬಜರಂಗದಳ ವಲಯ ಸಹಸಂಚಾಲಕ ಶೈಲೇಶ್ ಸಾಣೂರು ಕಾರ್ಯಕ್ರಮ ನಿರೂಪಿಸಿದರು. ಎಲ್ಲ ಸಂಘಪರಿವಾರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Post a comment