ಕಾದಂಬರಿ ಕರ್ಣ ಕುಂಡಲಧಾರಿಣಿ ಅನಾವರಣ-Times Of Karkala
ಕಾರ್ಕಳ,ಆ 23 : ಬರಹಗಾರ ಪರಮ್ ಭಾರದ್ವಾಜ್ ಅವರ ಚೊಚ್ಚಲ ಕಾದಂಬರಿ ಕರ್ಣ ಕುಂಡಲಧಾರಿಣಿ ಯನ್ನು ಲೇಖಕ ರಾಜೇಂದ್ರ ಭಟ್ ಭಾನುವಾರ ರಾಮಸಮುದ್ರದ ತಟದಲ್ಲಿ ಅನಾವರಣಗೊಳಿಸಿದರು.
ಮಂಜುನಾಥ ಪೈ ಸ್ಮಾರಕ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಿರ್ದೇಶಕ ಸುಧೀರ್ ಶಾನುಭೋಗ,ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕ ಆರ್ ವಿವೇಕಾನಂದ ಶೆಣೈ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಗೋಪಿನಾಥ್ ಶೆಣೈ,ರಾಘವೇಂದ್ರ ಮಠದ ಕಾರ್ಯಕರ್ತ ರಾಘವೇಂದ್ರ, ವೀಣಾ ಶಾನುಭೋಗ, ಸಾಣೂರ್ ನರಸಿಂಹ ಕಾಮತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Post a comment