ರಾಪಿಡ್ ಕೊರೋನಾ ಟೆಸ್ಟ್ ಗೆ ವಿರೋಧ-Times Of Karkala
ಬೆಲ್ಮನ್, ಆ 24:ಕೊರೋನಾ ರಾಪಿಡ್ ಟೆಸ್ಟ್ ಗೆ ಬೆಲ್ಮನ್ ಪೇಟೆಯ ಸುತ್ತಮುತ್ತಲ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪೇಟೆ ಆಸುಪಾಸಿನಲ್ಲಿ ಈಗಾಗಲೇ ಬಹಳಷ್ಟು ಮಂದಿ ಕೊರೋನಾ ಟೆಸ್ಟ್ ಗೆ ಒಳಪಟ್ಟಿದ್ದು, ಮತ್ತೆ ರಾಪಿಡ್ ಟೆಸ್ಟ್ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಹಿಂದೆ ಕೊರೋನಾ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಬೆಲ್ಮನ್ ಪೇಟೆ ಸಿಲ್ ಡೌನ್ ಕೂಡ ಆಗಿತ್ತು. ಐದು ತಿಂಗಳಿಂದ ಲಾಕ್ ಡೌನ್ ನಿಂದಾಗಿ ಸರಿಯಾಗಿ ವ್ಯಾಪಾರವಿಲ್ಲದೆ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರೆ. ಕೊರೋನಾ ಕ್ಕಿಂತಲೂ ಅದರ ಬಗೆಗಿನ ಅನಗತ್ಯ ಭಯ ಮತ್ತು ಅಪಪ್ರಚಾರದಿಂದಾಗಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಕೊರೋನಾ ಲಕ್ಷಣ ಇಲ್ಲದವರಿಗೆ ಪಾಸಿಟಿವ್ ವರದಿ ಬಂದು ಮಾನಸಿಕ ಹಿಂಸೆಗೆ ಒಳಗಾಗಿರುವ ಪ್ರಕರಣಗಳು ಇಲ್ಲಿ ಸುತ್ತಮುತ್ತ ಕಂಡು ಬಂದಿವೆ. ಹೀಗಾಗಿ ರಾಪಿಡ್ ಟೆಸ್ಟ್ ಕೈ ಬಿಡಬೇಕೆಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.
Post a comment