2019ನೇ ಸಾಲಿನಲ್ಲಿ ದರೋಡೆ ಮಾಡಿದ ತಂಡವನ್ನು ಜಯಪುರ ಪೋಲೀಸರು ಬಂಧಿಸಿ ವಿಚಾರಣೆಗಾಗಿ ಕಾರ್ಕಳ ಪೋಲೀಸ್ ಠಾಣೆಗೆ ಕರೆ ತಂದಿದ್ದಾರೆ.
ಬಜಗೋಳಿಯ ಸುಮ್ಮಗುತ್ತುವಿನಲ್ಲಿ 2019ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ದರೋಡೆ ಪ್ರಯತ್ನ ಮಾಡಲಾಗಿತ್ತು. ಅಂದು ಸುಮ್ಮಗುತ್ತು ಮನೆಯಲ್ಲಿ ಯಾರೂ ಕೂಡಾ ಇರದಿದ್ದುದ್ದನ್ನು ಕಂಡ ದರೋಡೆಕೋರರು ಮನೆಯೊಳಗೆ ಹೊಕ್ಕು ದರೋಡೆ ಪ್ರಯತ್ನ ಮಾಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಅವರ ಪ್ರಯತ್ನ ವಿಫಲವಾಗಿತ್ತು. ಮನೆಯಲ್ಲಿದ್ದವರನ್ನು ಕಟ್ಟಿಹಾಕಿ ಮನೆಯವರಿಗೆ ದರೋಡೆಕೋರರು ಥಳಿಸಿದ್ದರು. ಬಳಿಕ ಪರಾರಿಯಾಗಿದ್ದರು.ಈ ಘಟನೆ ಬಳಿಕ ಕಾರ್ಕಳ ಪೋಲೀಸರು ಅವರನ್ನು ಬಂಧಿಸಲು ವ್ಯಾಪಕವಾಗಿ ಹುಡುಕಾಟ ನಡೆಸಿದ್ದರು.
2020ನೇ ಸಾಲಿನ ಮಾರ್ಚ್ ನಲ್ಲಿ ಜಯಪುರದಲ್ಲಿ ದರೋಡೆ ನಡೆದ ಸಂದರ್ಭದಲ್ಲಿ ಅಲ್ಲಿನ ಪೋಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಜಗೋಳಿ ಬಳಿಯ ಈ ಪ್ರಕರಣ ಕೂಡಾ ಬೆಳಕಿಗೆ ಬಂದಿತ್ತು.ಆರೋಪಿಗಳಾದ ಬೆಳ್ತಂಗಡಿಯ
ಜಗದೀಶ್, ಪಡುಬಿದ್ರಿಯ ಸತೀಶ್ ಯಾನೆ ಶ್ರೀನಿವಾಸ್, ಸಾಗರದ ನಾಸಿರ್ ಶೇಖ್, ಬಳ್ಳಾರಿಯ ಆಂಜನೇಯ,ದೇರಳಕಟ್ಟೆಯ ಅಬ್ದುಲ್ ರಜಾಕ್,ಭಟ್ಕಳದ ಶಾಫಿ ಈಗ ಪೋಲೀಸ್ ಅತಿಥಿಗಳಾಗಿದ್ದಾರೆ.
ಬಹಳಷ್ಟು ತಿಂಗಳಿ೦ದ ಪೋಲೀಸರನ್ನು ಕಾಡುತ್ತಿದ್ದ ದರೋಡೆ ಪ್ರಕರಣವೊಂದು ಆರೋಪಿಗಳ
ಬಂಧನದಿ೦ದಾಗಿ ಮುಕ್ತಾಯಗೊಂಡಿದೆ.


Post a comment