ಎಂ ಪಿ ಎಂ ಕಾಲೇಜು ಕಾರ್ಕಳ:ಅಂತಾರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ-Times of karkala

ಎಂ ಪಿ ಎಂ ಕಾಲೇಜು ಕಾರ್ಕಳ:ಅಂತಾರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ-Times of karkala 

ಕಾರ್ಕಳ,ಆ.14:ಮಂಜುನಾಥ ಪೈ ಸರಕಾರಿ ಸ್ಮಾರಕ ಪ್ರಥಮದರ್ಜೆ ಕಾಲೇಜು ಕಾರ್ಕಳ ಇಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ನಡೆಯಿತು. ಭಾರತದ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ| ಎಸ್ ಆರ್. ರಂಗನಾಥನ್ ರವರ 128ನೇ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ, ಕಾಲೇಜಿನ ಗ್ರಂಥಾಲಯದ ನೂತನ ಆನ್ ಲೈನ್ ಪರಾಮರ್ಶನ ( ರೆಫರೆನ್ಸ್ ಸರ್ವಿಸ್) ಸೌಲಭ್ಯಗಳನ್ನು  ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀವರ್ಮ ಅಜ್ರಿ ಎಂ ಅನಾವರಣಗೊಳಿಸಿದರು.


ಈ ಸಂಧರ್ಭ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಶ್ರೀವರ್ಮ ಅಜ್ರಿ ಎಂ.ರವರು“ಗ್ರಂಥಾಲಯಗಳು ಶೈಕ್ಷಣಿಕ ಸಂಸ್ಥೆಗಳ ಆತ್ಮ, ಗ್ರಂಥಾಲಯಗಳು ನೀಡುವ ಪ್ರತಿಯೊಂದು ಸೇವೆಗಳೂ  ಅತ್ಯುತ್ತಮ ನಾಗರಿಕ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗುತ್ತವೆ,ಇದೇ ಸಂದಭ್ದಲ್ಲಿ ಅವರು ಮಾತನಾಡುತ್ತಾ, ಮನೆಯಲ್ಲಿಯೇ ವಿದ್ಯಾಭ್ಯಾಸವನ್ನು ಮುಂದುವರಿಸವಂತ  ಇಂದಿನ ಪರಿಸ್ಥಿತಿಯಲ್ಲಿ ಗ್ರಂಥಾಲಯದ ಈ ಸೇವೆಯು ವಿದ್ಯಾರ್ಥಿ ಸಮುದಾಯಕ್ಕೆ ಅತ್ಯುಪಯುಕ್ತವಾಗಲಿದೆ ಎಂದರು. 

ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ( ಐಕ್ಯುಎಸಿ) ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ   ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಗ್ರಂಥಪಾಲಕರಾದ ವೆಂಕಟೇಶ್, ಆನ್ ಲೈನ್ ರೆಫರೆನ್ಸ್ ಸರ್ವಿಸ್‌ನ ಬಗ್ಗೆ ಮಾಹಿತಿ ನೀಡಿದರು.  ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ಪ್ರೊ. ವಿದ್ಯಾಧರ ಹೆಗ್ಡೆ ಸ್ವಾಗತಿಸಿ, ಐಕ್ಯುಎಸಿ ಹಾಗೂ ನ್ಯಾಕ್ ಸಮಿತಿಯ ಸಂಚಾಲಕರಾದ ಶ್ರೀಮತಿ ಜ್ಯೋತಿ ಎಲ್. ಜನ್ನೆ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ  ಉಪನ್ಯಾಸಕ ಹಾಗೂ ಬೋಧಕೆತರ ಸಿಬ್ಬಂಧಿ ಉಪಸ್ಥಿತರಿದ್ದರು.




 

ಜಾಹೀರಾತು



 


  


Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget