ಉಡುಪಿ:ಬಂಧನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಕಿಶನ್ ಹೆಗ್ಡೆ ಕೊಳ್ಕೆಬೈಲು-Times of karkala
ಉಡುಪಿ:ಬಂಧನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಕಿಶನ್ ಹೆಗ್ಡೆ ಕೊಳ್ಕೆಬೈಲು-Times of karkala
ಉಡುಪಿ,ಆ.27:ನಕಲಿ ದಾಖಲೆ ಸೃಷ್ಟಿಸಿ ತನ್ನ ತಾಯಿ ಹಾಗು ಸಹೋದರನಿಗೆ ಸೇರಿದ ಜಮೀನಿನ ಮೇಲೆ ಸಲ ಪಡೆದು ವಂಚಿಸಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡ ಕಿಶನ್ ಹೆಗ್ಡೆ ಕೊಳ್ಕೆ ಬೈಲು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕುಂದಾಪುರ ಸಿವಿಲ್ ಸೆಷನ್ ಕೋರ್ಟ್ ವಜಾ ಮಾಡಿದೆ.
ಕಿಶನ್ ಹೆಗ್ಡೆ ವಿರುದ್ಧ ಕೇಸು ದಾಖಲಿಸಿರುವ ಕೋಟ ಪೊಲೀಸರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯದಲ್ಲಿ ವಂಚನೆ ಪ್ರಕರಣದ ಗಂಭೀರತೆ ಮನವರಿಕೆ ಮಾಡಿ ಪ್ರಥಮ ವರ್ತಮಾನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಬಗ್ಗೆ ಎರಡೂ ಕಡೆಗಳಿಂದ ವಾದವನ್ನು ಆಲಿಸಿದ ನ್ಯಾಯಾಧೀಶರು ಮೇಲ್ನೋಟಕ್ಕೆ ವಂಚನೆ ಪ್ರಕರಣ ಸಾಬೀತಾಗಿರುವುದರಿಂದ ಮತ್ತು ಜಿಪಿಎ ಮೂಲ ಪ್ರತಿಯನ್ನು ಹಾಜರುಪಡಿಸಲು ವಿಫಲವಾಗಿರುವುದರಿಂದ ಸರಕಾರಿ ಅಭಿಯೋಜಕರ ವಾದವನ್ನು ಎತ್ತಿ ಹಿಡಿದರು.ಕಿಶನ್ ಹೆಗ್ಡೆ ಕೊಳ್ಕೆ ಬೈಲು ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದರು. ಎರಡನೇ ಆರೋಪಿ ಪ್ರಸಾದಿನಿ ಶೆಡ್ತಿಯವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಆರೋಪಿ ಕಿಶನ್ ಹೆಗ್ಡೆ ಕೊಳ್ಕೆಬೈಲು ಬಂಧನ ಭೀತಿ ಎದುರಿಸುತ್ತಿದ್ದಾರೆ.
Post a comment