ಮಾಳ:ಬೆಳೆ ಸಮೀಕ್ಷೆಗೆ ಚಾಲನೆ -Times Of Karkala
ಕಾರ್ಕಳ,ಆ 26: ಮಾಳದ ಮಲ್ಲಾರಿನಲ್ಲಿ ಜರುಗಿದ ಕಾರ್ಕಳ ತಾಲೂಕು ಮಟ್ಟದ ಬೆಳೆ ಸಮೀಕ್ಷೆ 2020ಕ್ಕೆ ಚಾಲನೆ ಕೊಟ್ಟು ಮಾತನಾಡಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗು ವಿಧಾನಸಭೆಯ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್, ರೈತರಿಗೆ ಬೆಳೆ ದಾಖಲಾತಿಯಿಂದ ಸರಕಾರದ ವಿವಿಧ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ.ರೈತರು ಕೃಷಿ ಕಾರ್ಯಕ್ಕೆ ವಹಿಸಿದ ಕಾಳಜಿಯನ್ನೇ ಬೆಳೆ ದಾಖಲಾತಿಗೂ ವಹಿಸಬೇಕು ಎಂದು ಹೇಳಿದರು.
ರೈತರು ಯಾವುದೇ ಗೊಂದಲಗಳಿಗೆ ಅವಕಾಶ ಕೊಡದೆ, ತಮ್ಮ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಬೇಕು. ಬೆಳೆ ಸಮೀಕ್ಷೆಯ ಸದುಪಯೋಗ ಪಡೆಯಬೇಕು ಎಂದವರು ಹೇಳಿದರು.
ಬೆಳೆ ಸಮೀಕ್ಷೆಯನ್ನು ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ, ಭಾರತೀಯ ಕಿಸಾನ್ ಸಂಘ, ತೋಟಗಾರಿಕಾ ರೈತರ ಉತ್ಪಾದಕ ಕಂಪೆನಿ ಹಾಗು ಕಲ್ಪ್ವೃಕ್ಷ ತೆಂಗುಬೆಳೆಗಾರರ ಸಂಘ ಮಾಳ, ಇವರ ಜಂಟಿ ಆಯೋಗದಲ್ಲಿ ಬೆಳೆ ಸಮೀಕ್ಷೆ ಹಮ್ಮಿಕೊಳ್ಳಲಾಗಿತ್ತು.
ವೇದಿಕೆಯಲ್ಲಿ ಮಾಳ ಗ್ರಾಂ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಅಜಿತ್ ಹೆಗ್ಡೆ, ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿ ಉಪಾಧ್ಯಕ್ಷ ಹರಿಶ್ಚಂದ್ರ ತೆಂಡೂಲ್ಕರ್, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಉಮಾನಾಥ್ ರಾನಡೆ, ಕಲ್ಪ್ವೃಕ್ಷ ತೆಂಗು ಬೆಳೆಗಾರರ ಸಂಘ, ಮಾಳ ಅಧ್ಯಕ್ಷ ಅಶೋಕ್ ಬರ್ವೆ ,ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪೆನಿ ಅಧ್ಯಕ್ಷ ಅನಿಲ್ ಪೂಜಾರಿ, ಸಹಾಯಕ ಕೃಷಿ ನಿರ್ದೇಶಕ ಜಯರಾಜ್ ಪ್ರಕಾಶ್ ಉಪಸ್ಥಿತರಿದ್ದರು.
ಹೆಬ್ರಿ ತಹಶೀಲ್ದಾರ ಮಹೇಶ್ ಚಂದ್ರ ಸ್ವಾಗತಿಸಿದರು. ತೋಟಗಾರಿಕಾ ಸಹಾಯಕ ನಿರ್ದೇಶಕ ಬಿ ವಿ ಶ್ರೀನಿವಾಸ ವಂದಿಸಿದರು.
Post a comment