ರಾಜ್ಯದಲ್ಲಿ ಮೊದಲ ಬಾರಿಗೆ ಗಣಿತ ಪ್ರಯೋಗಾಲಯವನ್ನು ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ ಯಾಕೂಬ್ ಗೆ ರಾಷ್ಟ್ರ ಪ್ರಶಸ್ತಿ-Times of karkala

ರಾಜ್ಯದಲ್ಲಿ ಮೊದಲ ಭಾರಿಗೆ ಗಣಿತ ಪ್ರಯೋಗಾಲಯವನ್ನು ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ ಯಾಕೂಬ್ ಗೆ  ರಾಷ್ಟ್ರ ಪ್ರಶಸ್ತಿ -Times of karkala 

ಬೆಳ್ತಂಗಡಿ,ಆ 22:ರಾಜ್ಯದಲ್ಲೇ   ಮೊದಲ ಬಾರಿಗೆ   ಗಣಿತ ಪ್ರಯೋಗಾಲಯವನ್ನು ಸರ್ಕಾರಿ ಶಾಲೆಯಲ್ಲಿ  ಸ್ಥಾಪಿಸುವ ಮೂಲಕ ವಿಶಿಷ್ಟ ಸಾಧನೆಗೈದ ಬೆಳ್ತಂಗಡಿಯ ನಡಾ  ಶಾಲೆಯ ಶಿಕ್ಷಕ  ಯಾಕೂಬ್ ಕೊಯ್ಯುರ್  ಈ ಬಾರಿಯ  ರಾಷ್ಟ್ರ   ಪ್ರಶಸ್ತಿಗೆ   ಆಯ್ಕೆಯಾಗಿದ್ದಾರೆ. ಈ ಮೂಲಕ ಯಾಕುಬ್ ರ  ಪ್ರಯೋಗಶೀಲ   ಶಿಕ್ಷಣ ವಿಧಾನವನ್ನು  ಕೇಂದ್ರ ಗುರುತಿಸಿದೆ.

  

ಸರಕಾರದ ಅನುದಾನ  ವಿಲ್ಲದೆ  ಹಿರಿಯ ವಿದ್ಯಾರ್ಥಿಗಳು ಹಾಗು ದಾನಿಗಳ ಸಹಾಯದಿಂದ ನಿರ್ಮಿಸಿದ ಗಣಿತ ಪ್ರಯೋಗಾಲಯ ೨೦೧೫ ಅಲ್ಲಿ ಉದ್ಘಾಟನೆಗೊಂಡಿತ್ತು. ಗಣಿತದ ಮಾದರಿಗಳನ್ನು ಸುಲಭವಾಗಿ ಕಲಿಸುವುದು ಅವರ ಯೋಜನೆ.ಸ್ವಯಂ ಅಧ್ಯಯನ ಮಾಡಿ,ಗಣಿತದ ಮಾದರಿಗಳನ್ನು  ಮಾಡುವುದನ್ನು ಕಲಿಸಲಾಗುತ್ತದೆ. ಯುಟ್ಯೂಬ್ ನಲ್ಲೂ  ಸಾಕಷ್ಟು ಡೆಮೋ ಅಪ್ಲೋಡ್   ಆಗಿದೆ.

ಎಸ್ ಎಸ್ ಎಲ್ ಸಿ ಯಲ್ಲಿ ಶಾಲೆಗೆ ಉತ್ತಮ ಫಲಿತಾಂಶ  ಬಂದಿದೆ. ಅದರಲ್ಲಿ  ಯಾಕುಬ್ ಪಾತ್ರ   ಪ್ರಮುಖ. ವಿದ್ಯಾರ್ಥಿಗಳಿಗೆ ರಾತ್ರಿ ಶಾಲೆ ಕಲ್ಪನೆ  ಹುಟ್ಟು ಹಾಕಿರುವ ಯಾಕುಬ್, ವಿದ್ಯಾರ್ಥಿಗಳ ಮನೆಗೂ ಆಗಾಗ ಭೇಟಿ ನೀಡುತ್ತಿರುತ್ತಾರೆ.                                        

    

ಜಾಹೀರಾತು
















  











                                


Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget