ಉಡುಪಿ : ಗುರುನಾಥೇಂದ್ರ ಸರಸ್ವತಿ ಮಹಾಸ್ವಾಮಿಗಳಿಗೆ ಭಕ್ತಿ ಪೂರ್ವಕ ಗೌರವ ಸಮರ್ಪಣೆ-Times Of Karkala
ಉಡುಪಿ,ಆ 31 : ಪರಮಪೂಜ್ಯ ಶ್ರೀ ಶ್ರೀ ಗುರುನಾಥೇಂದ್ರ ಸರಸ್ವತಿ ಮಹಾಸ್ವಾಮಿಗಳು ಶುಕ್ರವಾರ ದೈವಾಧೀನರಾಗಿದ್ದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಭಕ್ತಿ ಪೂರ್ವಕ ಗೌರವ ನಮನ ಸಲ್ಲಿಸಲಾಯಿತು.
ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾ ಘಟಕದ ಮುಖಂಡ ನೇರಂಬಳ್ಳಿ ರಮೇಶ್ ಆಚಾರ್ಯ, ಶ್ರೀಗಳ ಭಾವಚಿತ್ರಕ್ಕೆ ದೀಪ ಬೆಳಗಿ ನಮನ ಸಲ್ಲಿಸಿದರು.
ಬ್ಯೆಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ನಾರಾಯಣ ಆಚಾರ್ಯ, ಹಿರಿಯ ವಿಶ್ವಕರ್ಮ ಮುಖಂಡರಾದ ಗಂಗಾಧರ ಆಚಾರ್ಯ ಉದ್ದಾಲಗುಡ್ಡೆ ಬಾರ್ಕೂರು, ಸ್ಪೋರ್ಟ್ಸ್ ಕನ್ನಡ ಕ್ರೀಡಾ ವೆಬ್ಸೈಟ್ ಸಂಚಾಲಕ ಕೋಟ ರಾಮಕೃಷ್ಣ ಆಚಾರ್ಯ, ಬ್ಯೆಂದೂರು ವಿಶ್ವಕರ್ಮ ಮಹಾ ಸಭಾದ ಸುಶಾಂತ್ ಆಚಾರ್ಯ ಬೈಂದೂರು ಮುಂತಾದವರು ಉಪಸ್ಥಿತರಿದ್ದರು.
Post a comment