ಕಾರ್ಕಳ:ವಿಶ್ವ ಕ್ರೀಡಾ ದಿನಾಚರಣೆಯ ಪ್ರಯುಕ್ತ ಕ್ರೀಡಾ ಸಾಮಗ್ರಿ ವಿತರಣೆ-Times of karkala
ಕಾರ್ಕಳ,ಆ.30:ವಿಶ್ವ ಕ್ರೀಡಾ ದಿನಾಚರಣೆಯ ಪ್ರಯುಕ್ತ ಕಾರ್ಕಳದ ರೋಟರಿ ಆನ್ಸ್ ಕ್ಲಬ್ ಮತ್ತು ರೋಟರ್ಯಾಕ್ಟ್ ಕ್ಲಬ್ ಇವರ ನೇತೃತ್ವದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಂಡ್ಲಿ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಬೆಟ್ಟು ಶಾಲೆಗಳಿಗೆ ಅವಶ್ಯಕತೆ ಇರುವ ಕ್ರೀಡಾ ಸಾಮಗ್ರಿಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಆನ್ಸ್ ಕ್ಲಬ್ ನ ಅಧ್ಯಕ್ಷೆ ರೋ. ರಮಿತಾ ಶೈಲೇಂದ್ರ ಮತ್ತು ಕಾರ್ಯದರ್ಶಿ ಸುಮಾ ನಾಯಕ್ ಅವರು ಹಾಗೂ ರೋಟರ್ಯಾಕ್ಟ್ ಕ್ಲಬ್ ನ ಕಾರ್ಯದರ್ಶಿ ಸಮೀರ್ ಹೆಗಡೆ, DRR ಪ್ರಶಾಂತ್ ಆಚಾರ್ಯರು ಉಪಸ್ಥಿತರಿದ್ದರು.ಹಾಗೂ ಎರಡು ಶಾಲೆಗಳ ಶಿಕ್ಷಣ ವರ್ಗದವರು ಮತ್ತು ಪೋಷಕರು ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Post a comment